ಮದುವೆ ಬಳಿಕ ಕ್ರಿಕೆಟ್ ಬಗ್ಗೆ ಆಸಕ್ತಿ ಕಳೆದುಕೊಂಡ ರೈನಾ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ವಾರ್ಷಿಕ ವೇತನ ಗುತ್ತಿಗೆ ಪಟ್ಟಿಯಲ್ಲಿ ಕನಿಷ್ಠ...
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ವಾರ್ಷಿಕ ವೇತನ ಗುತ್ತಿಗೆ ಪಟ್ಟಿಯಲ್ಲಿ ಕನಿಷ್ಠ ಸಿ ಶ್ರೇಣಿಯಲ್ಲೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿ ಸುಭದ್ರ ಸ್ಥಾನ ಸಂಪಾದಿಸಿದ್ದ ಸುರೇಶ್ ರೈನಾ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಆಯ್ಕೆಗಾರರು ರೈನಾರನ್ನು ಕಡೆಗಣಿಸಲು ಕಾರಣ ಎನ್ನಲಾಗಿದೆ.
ಕಳೆದ ಏಕದಿನ ವಿಶ್ವಕಪ್ ಬೆನ್ನಲ್ಲೇ ಏಪ್ರಿಲ್ ನಲ್ಲಿ ನೆದರ್ಲೆಂಡ್ ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಪ್ರಿಯಾಂಕಾ ಚೌಧರಿ ಎಂಬುವರನ್ನು ವಿವಾಹವಾಗಿದ್ದು ಬಳಿಕ ಕೌಟುಂಬಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಕ್ರಿಕೆಟ್ ಗಿಂತ ವಾಣಿಜ್ಯ ಉದ್ಯಮವೊಂದನ್ನು ಆರಂಭಿಸುವ ಬಗ್ಗೆಯೇ ಹೆಚ್ಚು ಆಸಕ್ತಿ ತೋರುತ್ತಿರುತ್ತಾರೆ ಎನ್ನಲಾಗಿದೆ.