ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಿನ ವರ್ಷದಿಂದ ಭಾರತೀಯ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಗೆ ಹೊಸ ನಿಯಾಮಾವಳಿ ಜಾರಿ ಮಾಡಲು ನಿರ್ಧರಿಸಿದ್ದು ಇದರ ಅನ್ವಯ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ರಾಷ್ಟ್ರೀಯ ಅಥವಾ ಐಪಿಎಲ್ ತಂಡಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
ಭಾರತ ಎ ತಂಡ ಹಾಗೂ ಕಿರಿಯರ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರಾಷ್ಟ್ರೀಯ ಅಥವಾ ಐಪಿಎಲ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ಇನ್ನು ಬಿಸಿಸಿಐ ಸಹಾಯಕ ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು 10 ರಿಂದ 12 ತಿಂಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ.