ಕ್ರಿಕೆಟ್

4ನೇ ಟೆಸ್ಟ್: ಆಸ್ಟ್ರೇಲಿಯಾ 137ಕ್ಕೆ ಆಲೌಟ್‌, ಸರಣಿ ಗೆಲ್ಲಲು ಭಾರತಕ್ಕೆ 87 ರನ್ ಅಗತ್ಯ

Lingaraj Badiger
ಧರ್ಮಶಾಲಾ: ಧರ್ಮಶಾಲಾದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 53.5 ಓವರ್‌ಗಳಲ್ಲಿ ಕೇವಲ 137 ರನ್‌ ಗಳಿಸಿ ಆಲೌಟ್‌ ಆಗಿದ್ದು, ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆಲ್ಲಲು ಇನ್ನು 87 ರನ್ ಗಳ ಅಗತ್ಯವಿದೆ.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಇಂದು ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಇದಕ್ಕು ಮುನ್ನ ಬ್ಯಾಟಿಂಗ್ ಮಾಡಿದ್ದ ಆಸಿಸ್ ತಂಡವನ್ನು ಭಾರತ 137 ರನ್​ಗಳಿಗೆ ಕಟ್ಟಿಹಾಕಿದೆ. 
ಉಮೇಶ್ ಯಾದವ್, ಆರ್ ಅಶ್ವಿನ್ ಹಾಗೂ ರವೀಂದ್ರ ಜಡೆಜಾ ಅವರು ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಎರಡನೇ ಇನಿಂಗ್ಸ್ ನಲ್ಲಿ ಆರಂಭಿಕರಾಗಿ ಬಂದ ಕೆ.ಎಲ್. ರಾಹುಲ್ 13ರನ್ ಹಾಗೂ ಮುರಳಿ ವಿಜಯ್ 6 ರನ್ ಗಳಿಸಿ ಆಟವನ್ನು ನಾಳೆಗೆ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ರೆನ್ಶಾ ಮತ್ತು ನಾಯಕ ಸ್ಟೀವ್ ಸ್ಮಿತ್ ಅಲ್ಪ ಮೊತ್ತಕ್ಕೆ ಔಟಾದರು. ಬಳಿಕ ಬಂದ ಗ್ಲೇನ್ ಮ್ಯಾಕ್ಸ್ ವೇಲ್ 45 ರನ್ ಗಳಿಸಿ ಔಟಾದರೆ, ಮ್ಯಾಥ್ಯೂ ವೇಡ್‌ ಅಜಯ 25ರನ್ ಗಳಿಸಿದರು.
SCROLL FOR NEXT