ನವದೆಹಲಿ: ಏಪ್ರಿಲ್ 5 ರಿಂದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಗಳು ಆರಂಭಗೊಳ್ಳಲಿದ್ದು ಟೂರ್ನಿಗೂ ಮುನ್ನ ಪಂದ್ಯ ಆಯೋಜನಾ ನಿಧಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಲಿದೆ.
ಐಪಿಎಲ್ ಪಂದ್ಯ ಆಯೋಜನ ನಿಧಿ ಪಾವತಿ ವಿಧಾನದಲ್ಲಿ ಕೆಲವೊಂದ ಬದಲಾವಣೆಗಳನ್ನು ಮಾಡಲಾಗಿದ್ದು, ರಾಜ್ಯ ಕ್ರಿಕೆಟ್ ಮಂಡಳಿಗಳು ಐಪಿಎಲ್ ಪಂದ್ಯ ಆಯೋಜನೆ ಮಾಡುವ ಮೊದಲೇ ಪಂದ್ಯ ಆಯೋಜನಾ ನಿಧಿಯನ್ನು ಬಿಡುಗಡೆ ಮಾಡಲು ಬಿಸಿಸಿಐ ನಿರ್ವಾಹಕ ಸಮಿತಿ ತೀರ್ಮಾನಿಸಿದೆ.
ಈ ಹಿಂದೆ ಪಂದ್ಯ ಆಯೋಜನೆಗೆ 60 ಲಕ್ಷ ರುಪಾಯಿ ನೀಡಲಾಗುತ್ತಿತ್ತು. ಮೊದಲಿಗೆ ಐಪಿಎಲ್ ಫ್ರಾಂಚೈಸಿಗಳು 30 ಲಕ್ಷ ರುಪಾಯಿಯನ್ನು ನೀಡುತ್ತಿದ್ದರು. ಇನ್ನುಳಿದ 30 ರುಪಾಯಿಯನ್ನು ಬಿಸಿಸಿಆ ಎರಡು ವಾರಗಳ ನಂತರ ನೀಡುತ್ತಿತ್ತು. ಈ ವಿಧಾನದಲ್ಲಿ ಬದಲಾವಣೆ ತರಲಾಗಿದ್ದು ಇನ್ನುಂದೆ ಪಂದ್ಯಕ್ಕೂ ಮೊದಲ ಸಂಪೂರ್ಣ ಮೊತ್ತ ರಾಜ್ಯ ಕ್ರಿಕೆಟ್ ಮಂಡಳಿಗಳ ಕೈಸೇರಲಿದೆ.
ಐಪಿಎಲ್ ಪಂದ್ಯಗಳನ್ನು ನಡೆಸುತ್ತಿರುವ 10 ಯೂನಿಟ್ ಗಳ ಅಧಿಕಾರಿಗಳು ಇಂದು ನಿರ್ವಹಣಾ ಸಮಿತಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದು ಈ ಕುರಿತು ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics