ಸಚಿನ್ ತೆಂಡೂಲ್ಕರ್-ಚೇತೇಶ್ವರ ಪೂಜಾರ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನೀಡಿದ್ದ ಚೇತೇಶ್ವರ ಪೂಜಾರರನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೈಲೆಂಟ್ ವಾರಿಯರ್ ಎಂದು ಕರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ 57 ರನ್ ಗಳಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ 1316 ರನ್ ಕಲೆಹಾಕಿ ಕಳೆದ ಎಂಟು ವರ್ಷಗಳ ಹಿಂದೆ ಗೌತಮ್ ಗಂಭೀರ್ ನಿರ್ಮಸಿದ್ದ ದಾಖಲೆಯೊಂದನ್ನು ಅಳಿಸಿ ಹಾಕಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್ ಸೈಲೆಂಟ್ ವಾರಿಯರ್ ಎಂದು ಕರೆದಿದ್ದಾರೆ.
ಚೇತೇಶ್ವರ ಪೂಜಾರ ಸೈಲೆಂಟ್ ವಾರಿಯರ್ ಆಗಿದ್ದು ಸೊಗಸಾದ ಮನೋಧರ್ಮ ಹೊಂದಿದ್ದಾರೆ. ಸಮರ್ಪಿತ, ಶಿಸ್ತುಬದ್ಧ ಹಾಗೂ ಗಮನಾರ್ಹ ವ್ಯಕ್ತಿತ್ವವನ್ನು ಹೊಂದಿರುವ ಮತ್ತೊರ್ವ ಆಟಗಾರನನ್ನು ಸದ್ಯದ ಪರಿಸ್ಥಿತಿಯಲ್ಲಿ ನಾನು ಕಂಡಿಲ್ಲ. ಪೂಜಾರ ತಂಡದಲ್ಲಿ ದೀರ್ಘವಾಗಿ ಆಡಲಿದ್ದಾರೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಟೆಸ್ಟ್ ನಲ್ಲಿ ಪೂಜಾರ 202 ರನ್ ಸಿಡಿಸಿದ್ದರು. ಐದು ದಿನಗಳ ಮಾದರಿಯಲ್ಲಿ ಅತೀ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಆಟಗಾರ ಎನಿಸಿದ್ದರು. ಇನ್ನು ಬೆಂಗಳೂರು ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 92 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics