ವಿರೇಂದ್ರ ಸೆಹ್ವಾಗ್ 
ಕ್ರಿಕೆಟ್

ಸೆಹ್ವಾಗ್ ಅಮೆರಿಕಾದ ಮುಂದಿನ ಅಧ್ಯಕ್ಷ: ಸಾಮಾಜಿಕ ಮಾಧ್ಯಮದಲ್ಲಿ ಕಿಡಿಹೊತ್ತಿಸಿದ ವೀರೂ ಪೋಸ್ಟ್

ಮಾಜಿ ಕ್ರಿಕೆಟ್‌ ತಾರೆ ವೀರೇಂದ್ರ ಸೆಹ್ವಾಗ್‌ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗುವ ಪ್ರಮುಖ ಅಭ್ಯರ್ಥಿ ಎಂಬ ಟ್ವಿಟರ್‌ ಸಂದೇಶ ...

ನವದೆಹಲಿ: ಮಾಜಿ ಕ್ರಿಕೆಟ್‌ ತಾರೆ ವೀರೇಂದ್ರ ಸೆಹ್ವಾಗ್‌ ಅವರು ಅಮೆರಿಕದ ಮುಂದಿನ ಅಧ್ಯಕ್ಷರಾಗುವ ಪ್ರಮುಖ ಅಭ್ಯರ್ಥಿ ಎಂಬ ಟ್ವಿಟರ್‌ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಹೊತ್ತಿಸಿದೆ.

ಈ ವಿಷಯ ವೀರೂ ಅಭಿಮಾನಿಗಳಿಗೆ ಸಂತಸ ತಂದಿದೆ, ಹಾಗೆ ಪೋಸ್ಟ್ ವೈರಲ್‌ ಆಗಿದ್ದು ಅಂತರ್ಜಾಲಕ್ಕೆ ಬೆಂಕಿ ಹೊತ್ತಿಸಿದಂತಾಗಿದೆ.  ನ್ಯೂಯಾರ್ಕ್‌ ಟೈಮ್ಸ್‌  ಎಂಬ ಪತ್ರಿಕೆಯಲ್ಲಿ ಈ ಸಂಬಂಧ ವರದಿ ಕೂಡ ಬಂದಿದೆ.

ಅಮೆರಿಕಕ್ಕೆ ಆಗೀಗ ಪ್ರವಾಸ ಕೈಗೊಳ್ಳುತ್ತಲೇ ಇರುವ ವೀರೇಂದ್ರ ಸೆಹವಾಗ್‌ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಲಿಯು ಸಂಪರ್ಕದಲ್ಲಿದೆ. ಹಾಲಿ ಅಧ್ಯಕ್ಷ ಟ್ರಂಪ್‌ ಹಾಗೂ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಸೆಹವಾಗ್‌ ಬಗ್ಗೆ ಅತೀವ ಆಸಕ್ತಿ ತೋರಿದ್ದಾರೆ. ಕಳೆದ ಚುನಾವಣೆಗಳಲ್ಲಿ ವ್ಯಕ್ತವಾಗಿರುವ ಒಲವನ್ನು ಗಮನಿಸಿದರೆ ಸೆಹ್ವಾಗ್‌ ಅವರು ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದ ಆಯ್ಕೆಯಾಗಿ ಮೂಡಿ ಬಂದಿದ್ದಾರೆ. ಅಧ್ಯಕ್ಷ ಟ್ರಂಪ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ವರ್ಷಾಂತ್ಯ ಭೇಟಿಯಾಗುವಾಗ ಈ ವಿಷಯವನ್ನು ಚರ್ಚಿಸುವ ನಿರೀಕ್ಷೆ ಇದೆ ಎಂಬ ಪೋಸ್ಟ್ ಅನ್ನು ವಿರೇಂದ್ರ ಸೆಹ್ವಾಗ್ ಹಾಕಿದ್ದಾರೆ.

ಮೂರ್ಖರ ದಿನದಂದು  ವಿರೇಂದ್ರ ಸೆಹ್ವಾಗ್ ಇಂಥ ಪೋಸ್ಟ್ ಹಾಕಿ ಎಲ್ಲರನ್ನು ಫೂಲ್ ಮಾಡಿದ್ದಾರೆ ಎಂಬ ವಿಷಯ ಗೊತ್ತಾಗಲು ಕೆಲಕಾಲ ಬೇಕಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)