ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ ಟೀಂ ಇಂಡಿಯಾ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಸೆಡ್ಡು ಹೊಡೆದು ಚಾಂಪಿಯನ್ಸ್ ಟ್ರೋಫಿಗೆ ಗೈರಾಗುವ ಬಿಸಿಸಿಐ ಪದಾಧಿಕಾರಿಗಳ ಯತ್ನಕ್ಕೆ ಭಾರೀ ಹೊಡೆತ ಬಿದ್ದಿದ್ದು...
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಸೆಡ್ಡು ಹೊಡೆದು ಚಾಂಪಿಯನ್ಸ್ ಟ್ರೋಫಿಗೆ ಗೈರಾಗುವ ಬಿಸಿಸಿಐ ಪದಾಧಿಕಾರಿಗಳ ಯತ್ನಕ್ಕೆ ಭಾರೀ ಹೊಡೆತ ಬಿದ್ದಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುಲು ವಿರಾಟ್ ಕೊಹ್ಲಿ ನೇತೃತ್ವದ ತಂಡ ಆಸಕ್ತಿ ತೋರಿದೆ ಎಂದು ಕೋಟ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಬೇಕು ಎಂದು ಭಾರತ ಕ್ರಿಕೆಟ್ ನ ದಂತಕಥೆಗಳಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಸಹ ಒತ್ತಾಯಿಸಿದ್ದರು.
ಐಸಿಸಿ ಹಾಗೂ ಬಿಸಿಸಿಐ ನಡುವಿನ ಹಣಕಾಸು ಹಂಚಿಕೆ ತಿಕ್ಕಾಟದಿಂದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೈರಾಗಲು ಬಿಸಿಸಿಐ ಪದಾಧಿಕಾರಿಗಳು ನಿರ್ಧರಿಸಿದ್ದರು. ಇದಕ್ಕೆ ಮೊದಲು ಬಿಸಿಸಿಐ ನಿಯೋಜಿತ ಆಡಳಿತಾಧಿಕಾರಿಗಳು ತಕರಾರು ಎತ್ತಿದರು. ಮಾತ್ರವಲ್ಲ ತಕ್ಷಣವೇ ತಂಡ ಪ್ರಕಟಿಸಿ ಎಂದು ತಾಕೀತು ಕೂಡ ಮಾಡಿದ್ದರು.
ಬಿಸಿಸಿಐ ಭಾನುವಾರ ವಿಶೇಷ ಸಭೆಯನ್ನು ನಡೆಯಲಿದ್ದು ಅದರಲ್ಲಿ ಬಿಸಿಸಿಐ ತನ್ನ ತಂಡವನ್ನು ಚಾಂಪಿಯನ್ಸ್ ಟ್ರೋಫಿಗೆ ಕಳುಹಿಸಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸಲಿದೆ.