ಬೆಂಗಳೂರು: ಟಿ20 ಮಾದರಿಯಲ್ಲಿ ಕ್ರಿಕೆಟ್ ದಿಗ್ಗಜರೆನಿಸಿಕೊಂಡಿರುವ ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್ ಮತ್ತು ಎಬಿ ಡಿವಿಲಿಯರ್ಸ್ ವಿಕೆಟ್ ಅನ್ನು ಒಂದೇ ಇನ್ನಿಂಗ್ಸ್ ನಲ್ಲಿ ಪಡೆಯುವ ಮೂಲಕ ಪಂಜಾಬ್ ತಂಡದ ಆಟಗಾರ ಸಂದೀಪ್ ಶರ್ಮಾ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಫ್ರಾಂಚೈಸಿ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಪರ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಯ್ಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆಡುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 10ನೇ ಆವೃತ್ತಿಯ ಪಂದ್ಯವೊಂದರಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವೇಗಿ ಸಂದೀಪ್ ಶರ್ಮಾ ಈ ಮೂವರು ದಿಗ್ಗಜ ಆಟಗಾರರ ವಿಕೆಟ್ ಪಡೆದಿದ್ದಾರೆ.
ಸಂದೀಪ್ ಶರ್ಮಾ ಮೊದಲ ವಿಕೆಟ್ ಕ್ರಿಸ್ ಗೇಯ್ಲ್ ಶೂನ್ಯ ಸಂಪಾದಿಸಿ ಆಡುತ್ತಿದ್ದ ಗೇಯ್ಲ್ ರನ್ನು ಔಟ್ ಮಾಡಿದರು. ನಂತರ ಬಂದ ವಿರಾಟ್ ಕೊಹ್ಲಿಯನ್ನು 6 ರನ್ ಗಳಿಗೆ ಬೌಲ್ಡ್ ಮಾಡಿದರು. ಬಳಿಕ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ 10 ರನ್ ಗಳಿಗೆ ಔಟ್ ಮಾಡಿದರು.
ಒಟ್ಟಾರೆ 2017ರ ಐಪಿಎಲ್ ನಲ್ಲಿ ಸಂದೀಪ್ ಶರ್ಮಾ 9 ಪಂದ್ಯಗಳನ್ನು ಆಡಿದ್ದು 14 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು ಅತೀ ಹೆಚ್ಚು ವಿಕೆಟ್ ಪಡೆದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.