ಸಂಗ್ರಹ ಚಿತ್ರ 
ಕ್ರಿಕೆಟ್

"ಕೊಹ್ಲಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲಿ": ಆರ್ ಸಿಬಿ ಸತತ ಸೋಲು, ಗವಾಸ್ಕರ್ ಟೀಕೆ

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವಂತಯೇ ತಂಡದ ನಾಯಕ ವಿರಾಟ್ ಕೊಹ್ಲಿ ಆಟದ ಬಗ್ಗೆ ಕೂಡ ಕೆಲ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವಂತಯೇ ತಂಡದ ನಾಯಕ ವಿರಾಟ್ ಕೊಹ್ಲಿ ಆಟದ ಬಗ್ಗೆ ಕೂಡ ಕೆಲ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2017ರ ಸರಣಿಯಲ್ಲಿ ಸತತ 5 ಸೋಲುಗಳ ಮೂಲಕ ಆರ್ ಸಿಬಿ ತಂಡ ಬಹುತೇಕ ಟೂರ್ನಿಯಿಂದಲೇ ಹೊರಬಿದ್ದಿದ್ದು, ನಾಯಕ ಕೊಹ್ಲಿ ತಂಡವನ್ನು ಪ್ರೇರೇಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಅಭಿಪ್ರಾಯಗಳು  ಕೇಳಿಬರುತ್ತಿವೆ. ಏತನ್ಮಧ್ಯೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ತಪ್ಪುಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾದಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು, ಕೊಹ್ಲಿ ತಮ್ಮನ್ನು ತಾವು ಕನ್ನಡಿಯಲ್ಲಿ  ಒಮ್ಮೆ ನೋಡಿಕೊಳ್ಳಲಿ. ಬಹಶಃ ಅವರಿಗೆ ತಮ್ಮ ತಪ್ಪಿನ ಅರಿವಾಗಬಹುದು ಎಂದು ಹೇಳಿದ್ದಾರೆ.

ಕೊಹ್ಲಿ ಓರ್ವ ಅದ್ಭುತ ಆಟಗಾರ. ಐಪಿಎಲ್ ಸರಣಿಗೂ ಮುನ್ನು ಕೊಹ್ಲಿ ಅದ್ಭುತವಾದ ಫಾರ್ಮ್ ನಲ್ಲಿ ಇದ್ದರು. ಇದೇ ಫಾರ್ಮ್ ಐಪಿಎಲ್ ನಲ್ಲೂ ಮುಂದುವರೆಯುವ ವಿಶ್ವಾಸವಿತ್ತು. ಆದರೆ ಅದು ಸುಳ್ಳಾಗಿದ್ದು, ಕೊಹ್ಲಿ ಅನಗತ್ಯ  ಹೊಡೆತಗಳಿಗೆ ಕೈಹಾಕಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ, ಪಂಜಾಬ್ ವಿರುದ್ಧ ಹಾಗೂ ಕೋಲ್ಕತಾ ವಿರುದ್ಧ ಕೊಹ್ಲಿ ಔಟ್ ಆದರ ಪರಿ ನಿಜಕ್ಕೂ ಶೋಚನೀಯವಾಗಿತ್ತು. ಅವರ ಶಾಟ್ ಸೆಲೆಕ್ಷನ್ ತಪ್ಪಾಗಿತ್ತು. ಆದರೆ ವಿಪರ್ಯಾಸವೆಂದರೆ  ಕೊಹ್ಲಿ ಮಾಡಿದ ತಪ್ಪನ್ನೇ ಮಾಡುತ್ತಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ನಾಯಕರಾಗಿ ಕಣಕ್ಕಿಳಿದಾಗ ಸಾಕಷ್ಟು ಒತ್ತಡದೊಂದಿಗೆ ಜವಾಬ್ದಾರಿ ಕೂಡ ಇರುತ್ತದೆ. ತಾನು ಫಾರ್ಮ್ ನಲ್ಲಿ ಇಲ್ಲದ ಸಂದರ್ಭದಲ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಬೇಕು ಮತ್ತು ಕೆಟ್ಟ ಎಸೆತಗಳನ್ನು ಮಾತ್ರ  ದಂಡಿಸಲು ಮುಂದಾಗಬೇಕು. ಗ್ಲಾಮರ್ ಶಾಟ್ ಗಳಿಗಿಂತ ಉತ್ತಮವಾದ ಕ್ರಿಕೆಟ್ ಶಾಟ್ ಗಳು ಮಾತ್ರ ಪಂದ್ಯ ಗೆಲ್ಲಿಸಿಕೊಡುತ್ತದೆ ಎಂದು ಗವಾಸ್ಕರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ