ಕ್ರಿಕೆಟ್

ಈ ಪಾಕ್ ಆಟಗಾರ ತಮ್ಮ ಫಾರ್ಮ್ ಕಳೆದುಕೊಂಡಾಗ ಭಾರತ ವಿರುದ್ಧ ಆಡುತ್ತಿದ್ದರಂತೆ!

Vishwanath S
ಪಾಕಿಸ್ತಾನ ಕ್ರಿಕೆಟ್ ನ ಖ್ಯಾತ ಆಟಗಾರರಾದ ಮಿಸ್ಬಾ ಉಲ್ ಹಕ್ ಮತ್ತು ಯೂನಿಸ್ ಖಾನ್ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ತಮ್ಮ ವೃತ್ತಿ ಬದುಕಿನ ಕೆಲ ಅವಿಸ್ಮರಣೀಯ ಸಂಗತಿಗಳನ್ನು ಹೇಳಿಕೊಂಡಿದ್ದಾರೆ. 
ಮಿಸ್ಬಾ ಉಲ್ ಹಕ್ ಪಿಎಸ್ಎಲ್ ಟೈಟಲ್ ಅನ್ನು ಗೆದ್ದು ಬೀಗಿದ್ದ ಅವರು ಈ ವೇಳೆ, ಫೈನಲ್ ಪಂದ್ಯದಲ್ಲಿ ಆಡುವಾಗ ನನ್ನ ಮೇಲೆ ಯಾವುದೇ ಒತ್ತಡವಿರುವುದಿಲ್ಲ ಎಂದು ಹೇಳಿದ್ದಾರೆ. 
ಯೂನಿಸ್ ಖಾನ್: ಡಮ್ಮಿ ನಾಯಕನಾಗಿ ಉಳಿದುಕೊಳ್ಳುವುದು ಸರಿಯಲ್ಲ ಎಂದು ತಂಡದ ನಾಯಕತ್ವದಿಂದ ಕೆಳಗಿಳಿದಿದ್ದೆ. 
2015ರ ವಿಶ್ವಕಪ್ ಬಳಿಕ ನಾಯಕ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದು, ತಂಡವನ್ನು ಒಬ್ಬನೇ ಒಬ್ಬ ಆಟಗಾರ ಗೆಲ್ಲಿಸಿಕೊಡಲು ಸಾಧ್ಯವಿಲ್ಲ. ಅಂದು ಶ್ರೀಲಂಕಾ ವಿರುದ್ಧ ನಾನು ಅಬ್ಬರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾನು ನಾಯಕ ಸ್ಥಾನವನ್ನು ತೊರೆದಿದ್ದೆ ಎಂದು ಹೇಳಿದ್ದಾರೆ. 
ನಾನು ಅತೀಂದ್ರಿಯ ಶಕ್ತಿಗಳಿಗೆ ಭಯ ಪಡಬಹುದು ಆದರೆ ಸಚಿನ್ ತೆಂಡೂಲ್ಕರ್ ಕಂಡರೇ ಭಯ ವಿಲ್ಲ. ಏಕೆಂದರೇ ಅವರು ಭೂತವಲ್ಲ ಎಂದು ಯೂನಿಸ್ ಖಾನ್ ಹೇಳಿದ್ದಾರೆ. 
2016ರಲ್ಲಿ ಲಾರ್ಡ್ಸ್ ನಲ್ಲಿ ಸೆಂಚೂರಿ ಹೊಡೆದಾಗ ಪುಷ್ ಅಪ್ಗ್ ಗಳನ್ನು ಹೊಡೆದಿದ್ದೆ. ಕಾರಣ ನಾನು ಲಾರ್ಡ್ಸ್ ಮೈದಾನದಲ್ಲಿ ಸೆಂಚೂರಿ ಹೊಡೆದರೇ ಪುಷ್ ಅಪ್ ಹೊಡೆಯುವುದಾಗಿ ಮಾತು ಕೊಟ್ಟಿದ್ದೆ. ಅದನ್ನು ನೆರವೇರಿಸಲು ಹೀಗೆ ಮಾಡಿದ್ದೆ. 
2016ರಲ್ಲಿ ಓವಲ್ ನಲ್ಲಿ ದ್ವಿಶತಕ ಸಿಡಿಸಿದ ಹಿಂದಿನ ರಹಸ್ಯವನ್ನು ರಿವೈಲ್ ಮಾಡಿದ ಯೂನಿಸ್ ಖಾನ್ ನನಗೆ ಟೀಂ ಇಂಡಿಯಾದ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರು ಕರೆ ಮಾಡಿ ಕ್ರೀಸ್ ನಲ್ಲಿ ನಿಲ್ಲುವಂತೆ ಸೂಚಿಸಿದ್ದರು. ಇದು ನನಗೆ ದ್ವಿಶತಕ ಸಿಡಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 
ಯೂನಿಸ್ ಖಾನ್ ಫಾರ್ಮ್ ಕಳೆದುಕೊಂಡಾಗ ಭಾರತದ ವಿರುದ್ಧ ಆಡುತ್ತಿದ್ದರಂತೆ. ಸಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಆಡಿದಾಗ ನಾನು ಮತ್ತೆ ಫಾರ್ಮ್ ಗೆ ಬರುತ್ತಿದೆದ ಎಂದು ಹೇಳಿದ್ದಾರೆ.
SCROLL FOR NEXT