ಮುಂಬೈ: ಗಾಯದ ಸಮಸ್ಯೆಯಿಂದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಕನ್ನಡಿಗ ಮನೀಶ್ ಪಾಂಡೆ ಹೊರಬಿದ್ದಿದ್ದಾರೆ.
ಟ್ರೋಫಿಗೂ ಮುನ್ನ ಟೀಂ ಇಂಡಿಯಾಗೆ ಭಾರೀ ಹಿನ್ನಡೆ ಉಂಟಾಗಿದೆ. ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಅದ್ಭುತವಾಗಿ ಆಡುತ್ತಿದ್ದ ಮನೀಶ್ ಪಾಂಡೆ ಇದೀಗ ಗಾಯ ಸಮಸ್ಯೆಗೆ ತುತ್ತಾಗಿದ್ದು ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಿಂದಲೂ ಹೊರಗುಳಿದಿದ್ದರು.
ಐಪಿಎಲ್ 10ನೇ ಆವೃತ್ತಿಯಲ್ಲಿ ಪಾಂಡೆ 14 ಪಂದ್ಯಗಳಿಂದ 396 ರನ್ ಗಳಿಸಿ ಲಯ ಉಳಿಸಿಕೊಂಡಿದ್ದರು. ಈ ಮೊದಲೇ ಬಿಸಿಸಿಐ ಆಟಗಾರರು ಗಾಯಗೊಂಡರೆ ಅವರ ಬದಲಿಗೆ ಇಂಗ್ಲೆಂಡ್ ಗೆ ತೆರಳಲು ಐವರು ಮೀಸಲು ಆಟಗಾರರನ್ನು ನೇಮಿಸಿತ್ತು. ಅಂತೆ ಇದೀಗ ತಮಿಳುನಾಡಿನವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಂಡವನ್ನು ಸೇರಿಕೊಂಡಿದ್ದಾರೆ.