ನವದೆಹಲಿ: ಟೀಂ ಇಂಡಿಯಾದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ ಎ ದರ್ಜೆ ಆಟಗಾರರ ವೇತನವನ್ನು ಶೇಖಡ 150ರಷ್ಟು ಹೆಚ್ಚಳ ಮಾಡಬೇಕೆಂಬ ಪ್ರಸ್ತಾಪ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಮುಂದೆ ಈ ಪ್ರಸ್ತಾವನೆಯನ್ನು ಅನಿಲ್ ಕುಂಬ್ಳೆ ಸಲ್ಲಿಸಿದ್ದು ಈ ವೇಳೆ ಸ್ಕೈಪ್ ಮೂಲಕ ವಿರಾಟ್ ಕೊಹ್ಲಿ ಸಹ ಅಭಿಪ್ರಾಯವನ್ನು ಸಲ್ಲಿಸಿದ್ದಾರೆ.
ಸದ್ಯ ಎ ಶ್ರೇಣಿ ಕ್ರಿಕೆಟಿಗರು ವಾರ್ಷಿಕ 2 ಕೋಟಿ ರುಪಾಯಿ ಪಡೆಯುತ್ತಿದ್ದರೆ ಬಿ ಮತ್ತು ಸಿ ಶ್ರೇಣಿ ಆಟಗಾರರು ಕ್ರಮವಾಗಿ 1 ಕೋಟಿ ಮತ್ತು 50 ಲಕ್ಷ ರುಪಾಯಿ ಪಡೆಯುತ್ತಿದ್ದಾರೆ. ಎಲ್ಲ 3 ಕ್ರಿಕೆಟ್ ಪ್ರಕಾರಗಳಲ್ಲಿ ಆಡುವ ಆಟಗಾರರು ವಾರ್ಷಿಕ 5 ಕೋಟಿ ರುಪಾಯಿ ಪಡೆಯಬೇಕೆಂಬುದು ಕುಂಬ್ಳೆ-ಕೊಹ್ಲಿ ವಾದವಾಗಿದೆ.