ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ತಂಡದಿಂದ ಕೈಬಿಟ್ಟಿರುವುದಕ್ಕೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದು ಮಾಜಿ ನಾಯಕ ಎಂಎಸ್ ಧೋನಿಗಿರುವ 'ಪ್ರಾಮುಖ್ಯತೆ' ನನಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹರ್ಭಜನ್ ಸಿಂಗ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಂಡದ ಆಯ್ಕೆ ವಿಷಯ ಬಂದಾಗ ಧೋನಿಯ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ನಾನೂ 19 ವರ್ಷಗಳಿಂದ ಭಾರತೀಯ ಕ್ರಿಕೆಟ್ ನಲ್ಲಿ ಸಕ್ರಿಯನಾಗಿದ್ದೇನೆ ಆದರೆ ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ತಂಡ ಎರಡು ಬಾರಿ ವಿಶ್ವಕಪ್ ಗೆದ್ದಾಗ ನಾನು ತಂಡದಲ್ಲಿದ್ದೆ. ನನ್ನ ಸಲಹೆಯನ್ನೇಕೆ ಕೇಳುವುದಿಲ್ಲ. ಧೋನಿ ನಾಯಕರಾಗಿದ್ದವರು ನಿಜ. ಆದರೆ ನಾಯಕತ್ವದಿಂದ ಕೆಳಗಿಳಿದರೂ ಅವರ ಮಾತಿಗೆ ಮನ್ನಣೆ ಇದೆ ಎಂದು ಹೇಳಿದ್ದಾರೆ.
ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ತಂಡದಲ್ಲಿ ಧೋನಿ ಪಾತ್ರವೇನು ಎನ್ನುವ ಪ್ರಶ್ನೆಗೆ ಧೋನಿ ಅನುಭವಿ ಆಟಗಾರ. ಅವರ ಸಲಹೆಗಳು ತಂಡಕ್ಕೆ ಅಗತ್ಯ ಎಂದಿದ್ದರು. ಹರ್ಭಜನ್ ತಾವೂ ಅನುಭವಿ ಆಟಗಾರರಾಗಿದ್ದು ತಮಗೇಕೆ ಸಿಗಬೇಕಿರುವ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics