ಲಂಡನ್: ಕೆಲ ದಿನಗಳ ಹಿಂದಷ್ಟೆ ಮ್ಯಾಂಚೆಸ್ಟರ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಜೂನ್ 1ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿಗೆ ಭದ್ರತೆ ಸಮಸ್ಯೆ ಆಂತಕ ಸೃಷ್ಟಿಯಾಗಿದ್ದರು ನಮ್ಮ ಆದ್ಯತೆ ಕ್ರಿಕೆಟ್‌ಗೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆ ಲಂಡನ್ ತಲುಪಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ. ಚಾಂಪಿಯನ್ಸ್ ಟ್ರೋಫಿ ಉಳಿಸಿಕೊಳ್ಳುವುದೊಂದೇ ನಮ್ಮ ಗುರಿ. ಭದ್ರತೆ ಆಂತಕ ಖಂಡಿತ ಇದೆ ಆದರೆ ಚಾಂಪಿಯನ್ಸ್ ಟ್ರೋಫಿಯಂಥ ಮಹತ್ವದ ಪಂದ್ಯಾವಳಿಯಲ್ಲಿ ಆಡುವಾಗ ನಮ್ಮ ಗಮನವನ್ನು ಏನಿದ್ದರೂ ಆಟದ ಕಡೆಗೆ ಮಾತ್ರ ಕೇಂದ್ರೀಕರಿಸಲು ಪ್ರಯತ್ಮಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಬಿಸಿಸಿಐನ ಭದ್ರತಾ ಅಧಿಕಾರಿ ದೆಹಲಿಯ ಮಾಜಿ ಆಯುಕ್ತ ನೀರಜ್ ಕುಮಾರ್ ಭಾರತ ತಂಡ ಪಂದ್ಯ ಆಡಲಿರುವ ಸ್ಥಳಗಳಿಗೆ ತೆರಳಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಜೂನ್ 4ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಎಡ್ಜ್ ಬಸ್ಟನ್ ನಲ್ಲಿ ಭಾರತ ಮೊದಲ ಪಂದ್ಯವನ್ನಾಡಲಿದೆ.