ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 45 ರನ್ ಗಳ ಜಯ

ಲಂಡನ್ ನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 45 ರನ್ ಗಳ ಜಯ ದಾಖಲಿಸಿದೆ.

ಲಂಡನ್: ಲಂಡನ್ ನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 45 ರನ್ ಗಳ ಜಯ ದಾಖಲಿಸಿದೆ.
ನ್ಯೂಜಿಲೆಂಡ್ ನೀಡಿದ 190 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿದ ಭಾರತ 26 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಈ ವೇಳೆ ಮಳೆ ಸುರಿದು ಆಟಕ್ಕೆ ಅಡ್ಡಿ ಪಡಿಸಿತು. ಬಳಿಕ ಮಳೆ ಮುಂದುವರೆದ ಹಿನ್ನಸಲೆಯಲ್ಲಿ ಅಂಪೈರ್ ಗಳು ಪಂದ್ಯವನ್ನು ರದ್ದು  ಮಾಡಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತವನ್ನು ವಿಜಯಿ ಎಂದು ಘೋಷಿಸಿದರು. ಅದರಂತೆ ಭಾರತ ವಿಲಿಯಮ್ಸನ್ ಪಡೆ ವಿರುದ್ಧ 45 ರನ್ ಗಳ ಜಯ ದಾಖಲಿಸುವುದರೊಂದಿಗೆ ಶುಭಾರಂಭ ಮಾಡಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 38.4 ಓವರ್ ಗಳಲ್ಲಿ 189 ರನ್ ಗಳಿಗೆ ಆಲ್ ಔಟ್ ಆಗಿತ್ತು. ನೂಜಿಲೆಂಡ್ ಪರ ರೊಂಚಿ 66 ರನ್ ಮತ್ತು ನೀಶಮ್ ಅಜೇಯ 46 ರನ್ ಗಳಿಸಿ ಕಿವೀಸ್ ಪಡೆಗೆ ಆಸರೆಯಾಗಿದ್ದರು. ಇನ್ನು ನೂಜಿಲೆಂಡ್  ನೀಡಿದ 190 ರನ್ ಗಳ ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. 7 ರನ್ ಗಳಿಸಿದ್ದ ಅಜಿಂಕ್ಯಾ ರಹಾನೆಯನ್ನು ಸೌಥಿ ಔಟ್ ಮಾಡಿದ್ದರು. ಬಳಿಕ ವಿರಾಟ್ ಕೊಹ್ಲಿ ಜೊತೆ ಗೂಡಿದ ಶಿಖರ್ ಧವನ್ ಉತ್ತಮ ಆಟವಾಡುವ ಮೂಲಕ ಭಾರತವನ್ನು ಆರಂಭಿಕತ ಆಘಾತದಿಂದ  ಮೇಲೆತ್ತಿದರು. ಈ ಜೋಡಿ 68 ರನ್ ಗಳ ಜೊತೆಯಾಟ ನೀಡಿತು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಕೈಹಾಕಿದ ಧವನ್ ನೀಶಮ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಬಂದ ಕಾರ್ತಿಕ್ ಕೂಡ ಶೂನ್ಯಕ್ಕೆ ಔಟ್ ಆದರು.
ಬಳಿಕ ಕ್ರೀಸ್ ಗೆ ಬಂದ ಮಾಜಿ ನಾಯಕ ಎಂಎಸ್ ಧೋನಿ ವಿರಾಟ್ ಕೊಹ್ಲಿ ಜೊತೆಗೂಡಿ ತಂಡಕ್ಕೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಂಡರು. ಇದೇ ಹೊತ್ತಿನಲ್ಲೇ ಕೊಹ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಮಳೆ ಆರಂಭವಾಗಿ ಪಂದ್ಯ ರದ್ದಾಗುವಂತೆ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ