ಟೀಂ ಇಂಡಿಯಾ ಕೋಚ್ ಹುದ್ದೆಗಾಗಿ ಅನಿಲ್ ಕುಂಬ್ಳೆ ಜತೆ ಸೆಹ್ವಾಗ್ ಸ್ಪರ್ಧೆ!
ಮುಂದಿನ ಚಾಂಪಿಯನ್ಸ್ ಟ್ರೋಫಿ ನಂತರ ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಕಾಲಾವಧಿ ಮುಕ್ತಾಯಗೊಳ್ಳಿದ್ದು ಬಿಸಿಸಿಐ ತಂಡದ ಮುಖ್ಯ ಕೋಚ್...
ನವದೆಹಲಿ: ಮುಂದಿನ ಚಾಂಪಿಯನ್ಸ್ ಟ್ರೋಫಿ ನಂತರ ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಕಾಲಾವಧಿ ಮುಕ್ತಾಯಗೊಳ್ಳಿದ್ದು ಬಿಸಿಸಿಐ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ,
ಪ್ರಸ್ತುತ ಅನಿಲ್ ಕುಂಬ್ಳೆ ಅವರೇ ಆಟೋಮೆಟಿಕ್ ಆಗಿ ಮುಂದಿನ ಕೋಚ್ ಹುದ್ದೆಯ ಅಭ್ಯರ್ಥಿಯಾಗಿದ್ದಾರೆ. ಇದರಿಂದಾಗಿ ಕುಂಬ್ಳೆ ಜತೆ ಕೋಚ್ ಹುದ್ದೆಗಾಗಿ ಯಾರು ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನುವ ಕುತೂಹಲ ಕೆರಳಿಸಿದ್ದು ಅದಕ್ಕೆ ಉತ್ತರ ಸಿಕ್ಕಿದೆ. ಖಾಸಗಿ ಮಾಧ್ಯಮದ ಪ್ರಕಾರ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಕೋಚ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಐಪಿಎಲ್ ಪಂದ್ಯಗಳ ವೇಳೆ ಸೆಹ್ವಾಗ್ ಅವರನ್ನು ಬಿಸಿಸಿಐ ಅಧಿಕಾರಿಯೊಬ್ಬರು ಸಂಪರ್ಕಿಸಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕೋರಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಸೆಹ್ವಾಗ್ ಅಷ್ಟೇ ಅಲ್ಲ ಹಲವು ಮಾಜಿ ಕ್ರಿಕೆಟಿಗರು ಸಹ ಕೋಚ್ ಹುದ್ದೆಯ ಸ್ಪರ್ಧೆಯಲ್ಲಿ ಜಿಗಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಉನ್ನತ ಮೂಲವೊಂದು ತಿಳಿಸಿದೆ.
ಇನ್ನು ಕೋಚ್ ಹುದ್ದೆಗೆ ಅರ್ಜಿ ಸಂಬಂಧ ಪ್ರತಿಕ್ರಿಯಿಸಿರುವ ವೀರೇಂದ್ರ ಸೆಹ್ವಾಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಸಂಬಂಧ ಈವರೆಗೂ ಯಾರನ್ನೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.