ವಿರಾಟ್ ಕೊಹ್ಲಿ, ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ನಲ್ಲಿ ಅದ್ಭುತ ಕ್ಯಾಚ್ ಗಳನ್ನು ಹಿಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯ ಅಭ್ಯಾಸ ಪಂದ್ಯದ ವೇಳೆ ಕೀಪಿಂಗ್ ಗ್ಲೌಸ್ ಧರಿಸಿದೆ ಸಾಮಾನ್ಯ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಧೋನಿ ಬದಲಿಗೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. ವಿಕೆಟ್ ಕೀಪರ್ ಹಿಂದೆ ಬೌಂಡರಿ ಲೈನ್ ನಲ್ಲಿ ನಿಂತಿದ್ದ ಎಂಎಸ್ ಧೋನಿ, ಹಾರ್ಧಿಕ್ ಪಾಂಡ್ಯ ಎಸೆತದಲ್ಲಿ ಟಸ್ಕಿನ್ ಸಿಡಿಸಿದ ಚೆಂಡನ್ನು ಕೈಚೆಲ್ಲಿದರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ನಗು ತಡೆಯಲಾಗದೇ ಜೋರಾಗಿ ನಕ್ಕರು.
ಇನ್ನು ತಮ್ಮ ಎಡವಟ್ಟಿನಿಂದ ಕ್ಯಾಚ್ ಮಿಸ್ ಮಾಡಿದ ಧೋನಿ ಸಹ ನಗುತ್ತಾ ಚೆಂಡನ್ನು ಕೀಪರ್ ಗೆ ಎಸೆದರು. ಈ ದೃಶ್ಯ ಆಟಗಾರರನ್ನು ನಗುವಂತೆ ಮಾಡಿತ್ತು.
ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ 324 ರನ್ ಗಳಿಸಿತ್ತು. 325 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 84 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಭಾರತಕ್ಕೆ ಶರಣಾಗಿತ್ತು.