ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಪಾಕ್ ಕಟ್ಟಾ ಅಭಿಮಾನಿ 'ಚಾಚಾ ಚಿಕಾಗೊ' ಬೆಂಬಲ ಇದೀಗ ಟೀಂ ಇಂಡಿಯಾಗೆ!

ಚಾಚಾ ಚಿಕಾಗೊ ಎಂದೇ ಖ್ಯಾತಿ ಪಡೆದಿರುವ ಪಾಕಿಸ್ತಾನ ಕ್ರಿಕೆಟಿನ ಅತೀ ದೊಡ್ಡ ಅಭಿಮಾನಿ ಮೊಹಮ್ಮದ್ ಬಶೀರ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ...

ಚಾಚಾ ಚಿಕಾಗೊ
Vishwanath S
Updated On : 31 May 2017, 2:08 am
ಕರಾಚಿ: ಚಾಚಾ ಚಿಕಾಗೊ ಎಂದೇ ಖ್ಯಾತಿ ಪಡೆದಿರುವ ಪಾಕಿಸ್ತಾನ ಕ್ರಿಕೆಟಿನ ಅತೀ ದೊಡ್ಡ ಅಭಿಮಾನಿ ಮೊಹಮ್ಮದ್ ಬಶೀರ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಭಾರತ-ಪಾಕಿಸ್ತಾನ ನಡುವಿನ ಪಂದ್ಯವೀಗ ನಿಕಟ ಸ್ಪರ್ಧೆಯಾಗಿ ಉಳಿದಿಲ್ಲ. ಟೀಂ ಇಂಡಿಯಾ ಪಾಕಿಸ್ತಾನಕ್ಕಿಂತ ಎಷ್ಟೋ ಮುಂದೆ ಹೋಗಿದೆ. ಒಂದು ಕಡೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ರಂಥ ಅದ್ಭುತ ಆಟಗಾರರಿದ್ದಾರೆ. ಆದೆರ ಪಾಕಿಸ್ತಾನದಲ್ಲಿ ಸರದಿಯಲ್ಲಿ ಇವರಿಗೆ ಸರಿಸಾಟಿಯಾಗುವಂಥ ಬ್ಯಾಟ್ಸ್ ಮನ್ ಗಳೇ ಇಲ್ಲ ಎನ್ನುವ ಮೂಲಕ ಬಶೀರ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಒಂದು ಕಾಲದಲ್ಲಿ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಮಿಯಾಂದಾದ್, ವಾಸೀಂ ಅಕ್ರಂ, ವಕಾರ್ ಯೂನಿಸ್ ಅವರಂಥ ಘಟಾನುಘಟಿ ಆಟಗಾರರಿದ್ದರು. ಆದರೆ ಈಗಿನ ತಂಡದಲ್ಲಿನ ಆಟಗಾರರ ಹೆಸರೇ ತಿಳಿದಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸುಲಭ ಜಯ ಸಾಧಿಸಬಹುದು ಎಂದು ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement