ರಾಜ್ ಕೋಟ್: ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 40 ರನ್ ಗಳ ಹೀನಾಯ ಸೋಲು ಅನುಭವಿಸಿದೆ.
ನ್ಯೂಜಿಲೆಂಡ್ ನೀಡಿದ 197 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕೊಹ್ಲಿ ಪಡೆ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದು, ಮುಂದಿನ ಪಂದ್ಯ ನಿರ್ಣಾಯಕವಾಗಲಿದೆ.
ಭಾರತದ ಇಂದಿನ ಸೋಲಿಗೆ ಕೊಹ್ಲಿ ಪಡೆಯ ಸ್ವಯಂಕೃತ ಅಪರಾಧವೇ ಕಾರಣ ಎಂದು ಹೇಳಬಹುದು. ಮೊದಲು ಕಳಪೆ ಫೀಲ್ಡಿಂಗ್ ನಿಂದ ಕಿವೀಸ್ ಪಡೆಗೆ ರನ್ ಗಳು ಹರಿಯಲು ಅನುವು ಮಾಡಿಕೊಡಲಾಯಿತು. ಬಳಿಕ ಬ್ಯಾಟಿಂಗ್ ನಲ್ಲೂ ಕಳಪೆ ಪ್ರದರ್ಶನದ ಮೂಲಕ ಕೊಹ್ಲಿ ಭಾರತದ
ಅಭಿಮಾನಿಗಳ ನಿರಾಸೆಗೆ ಕಾರಣರಾದರು. ಕೊಹ್ಲಿ, ಧೋನಿ, ಶ್ರೇಯಸ್ ಅಯ್ಯರ್ ರನ್ನು ಹೊರತು ಪಡಿಸಿ ತಂಡದ ಇನ್ನಾವುದೇ ಆಟಗಾರ ಕೂಡ ಎರಡಂಕಿ ದಾಟದೇ ಇರುವುದು ತಂಡದ ಇಂದಿನ ಕಳಪೆ ಬ್ಯಾಟಿಂಗ್ ಸಾಕ್ಷಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics