ಕ್ರಿಕೆಟ್

ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹಾಟ್ ಫೋಟೋಶೂಟ್! ಟೀಕೆ

Vishwanath S
ನವದೆಹಲಿ: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹಾಗೂ ವಿಶ್ವದ ನಂಬರ್ 1 ಬ್ಯಾಟಿಂಗ್ ಅಗ್ರ ಶ್ರೇಯಾಂಕಿತೆ ಮಿಥಾಲಿ ರಾಜ್ ಹಾಟ್ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. 
ಮಿಥಾಲಿ ರಾಜ್ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬ್ಲಾಕ್ ಡ್ರೆಸ್ ತೊಟ್ಟಿರುವ ಮಿಥಾಲಿ ಬ್ಯಾಟಿಂಗ್ ಶೈಲಿಯನ್ನು ಪ್ರದರ್ಶಿಸುವ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
ಮಿಥಾಲಿ ರಾಜ್ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಸ್ನೇಹಿತೆಯರೊಂದಿಗೆ ಕ್ಲಿಕ್ಸಿಸಿದ ಸೆಲ್ಫಿಯನ್ನು ಮಿಥಾಲಿ ರಾಜ್ ಟ್ವೀಟರ್ ನಲ್ಲಿ ಪ್ರಕಟಿಸಿದ್ದರು. ಈ ಚಿತ್ರದಲ್ಲಿ ಮಿಥಾಲಿ ತೊಟ್ಟಿದ್ದ ಬಟ್ಟೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೇಳಿ ಬಂದಿದ್ದವು. 
SCROLL FOR NEXT