ಕ್ರಿಕೆಟ್

ಅಪರೂಪದ ಸಾಧನೆ: ಒಂದೇ ಪಂದ್ಯದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸ್ಟಾರ್ಕ್‌

Vishwanath S
ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಒಂದು ಸಾಧನೆ ಮಾಡಿದ್ದಾರೆ. ಒಂದೇ ಪಂದ್ಯದಲ್ಲಿ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ. 
ಶೆಫೆಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌಥ್ ವೇಲ್ಸ್ ತಂಡದ ಪರ ಆಡುತ್ತಿರುವ ಮಿಚೆಲ್ ಸ್ಟಾರ್ಕ್ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಒಮ್ಮೆ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಕೀಳುವ ಮೂಲಕ ಈ ವಿನೂತನ ದಾಖಲೆ ನಿರ್ಮಿಸಿದ್ದಾರೆ. 
ಮಿಚೆಲ್ ಸ್ಟಾರ್ಕ್ ಮಾರಕ ದಾಳಿಯಿಂದಾಗಿ ನ್ಯೂ ಸೌಥ್ ವೇಲ್ಸ್ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ 171 ರನ್ ಗಳಿಂದ ಗೆಲುವು ಸಾಧಿಸಿದೆ. 
ಇನ್ನು ಮಿಚೆಲ್ ಸ್ಟಾರ್ಕ್ ಗೂ ಮುನ್ನ ಭಾರತದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 1963ರಲ್ಲಿ ಸರ್ವೀಸಸ್ ಹಾಗೂ ಉತ್ತರ ಪಂಜಾಬ್ ನಡುವಿನ ಪಂದ್ಯದಲ್ಲಿ ಜೋಗಿಂದರ್ ರಾವ್ ಎರಡೆರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. 
SCROLL FOR NEXT