ಸಂಗ್ರಹ ಚಿತ್ರ 
ಕ್ರಿಕೆಟ್

ಕಿವೀಸ್ ಕಿವಿ ಹಿಂಡಿದ ಭಾರತಕ್ಕೆ ಸರಣಿ ಜಯ, ಟಿ20 ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ ಪಾಕಿಸ್ತಾನ!

ಭಾರತ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ಸಾಧಿಸುತ್ತಿದ್ದಂತೆಯೇ ಅತ್ತ ಐಸಿಸಿ ಟಿ20 ರ‍್ಯಾಂಕಿಂಗ್ ನಲ್ಲೂ ನ್ಯೂಜಿಲೆಂಡ್ ತಂಡ ತನ್ನ ಅಗ್ರ ಸ್ಥಾನ ಕಳೆದುಕೊಂಡಿದೆ.

ಮುಂಬೈ: ಇತ್ತ ತಿರುವನಂತಪುರಂ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ಸಾಧಿಸುತ್ತಿದ್ದಂತೆಯೇ ಅತ್ತ ಐಸಿಸಿ ಟಿ20 ರ‍್ಯಾಂಕಿಂಗ್ ನಲ್ಲೂ ನ್ಯೂಜಿಲೆಂಡ್ ತಂಡ ತನ್ನ ಅಗ್ರ ಸ್ಥಾನ ಕಳೆದುಕೊಂಡಿದೆ.
ಇಂದಿನ ಸರಣಿ ಸೋಲಿನ ಮೂಲಕ ನ್ಯೂಜಿಲೆಂಡ್ ಖಾತೆಯಿಂದ 5 ಅಂಕಗಳು ಕಡಿತವಾಗಿದ್ದು, ಕಿವೀಸ್ ಪಡೆ ಇದೀಗ 120 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಅಂತೆಯೇ 124 ಅಂಕಗಳಿಸಿರುವ ಪಾಕಿಸ್ತಾನ ತಂಡ ಮಾತ್ರ ಅಗ್ರಸ್ಛಾನಕ್ಕೇರಿದ್ದು ಮಾತ್ರವಲ್ಲದೇ ತನ್ನ ಸ್ಥಾನವನ್ನು  ಗಟ್ಟಿಗೊಳಿಸಿಕೊಂಡಿದೆ. 
ಇನ್ನು 120 ಅಂಕಗಳಿಸಿರುವ ವೆಸ್ಟ್ ಇಂಡೀಸ್ 3ನೇ ಸ್ಥಾನದಲ್ಲಿದ್ದು.119 ಅಂಕಗಳಿಂದ ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಸರಣಿ ಜಯದ ಮೂಲಕ ಭಾರತದ ಆಂಕಗಳಿಕೆಯಲ್ಲಿ 2 ಅಂಕ ಹೆಚ್ಚಾಗಿದ್ದು, ಭಾರತ 119 ಅಂಕಗಳೊಂದಿಗೆ 5ನೇ  ಸ್ಥಾನದಲ್ಲಿದೆ.
112 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ 6 ಮತ್ತು 111 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ 7ನೇ ಸ್ಥಾನದಲ್ಲಿದೆ.
ಒಟ್ಟಾರೆ ಪ್ರಬಲ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ಸರಣಿ ಗೆದ್ದರೆ ಪಾಕಿಸ್ತಾನ ಮಾತ್ರ ಶ್ರಮವಿಲ್ಲದೇ ಆಗ್ರ ಸ್ಥಾನಕ್ಕೇರಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!