ಗುಂಟೂರ್(ಆಂಧ್ರ): ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳು ಸೃಷ್ಠಿಯಾಗಿವೆ. ಆದರೆ ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡವೊಂದು ಕೇವಲ 2 ರನ್ ಗಳಿಗೆ ಆಲೌಟ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಹಿಳಾ ಅಂಡರ್ 19 ಏಕದಿನ ಲೀಗ್ ಮತ್ತು ನಾಕ್ ಔಟ್ ಟೂರ್ನಮೆಂಟ್ ನಲ್ಲಿ ನಾಗಲ್ಯಾಂಡ್ ಅಂಡರ್ 19 ಮಹಿಳಾ ಕ್ರಿಕೆಟ್ ತಂಡದ 17 ಓವರ್ ಗಳಲ್ಲಿ ಕೇವಲ 2 ರನ್ ಗಳಿಗೆ ಆಲ್ ಔಟ್ ಆಗಿದೆ.
ಗುಂಟೂರಿನ ಜೆಕೆಸಿ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇರಳ ಮಹಿಳಾ ಅಂಡರ್ 19 ತಂಡದ ವಿರುದ್ಧ ನಾಗಲ್ಯಾಂಡ್ ಪರ ಆರಂಭಿಕ ಆಟಗಾರ್ತಿ ಮೇನಕಾ 18 ಎಸೆತಗಳಲ್ಲಿ ಎರಡು ರನ್ ಗಳಿಸಿದ್ದು ಬಿಟ್ಟರೇ ಇನ್ನುಳಿದ 9 ಬ್ಯಾಟ್ ಮನ್ ಗಳು ಡಕ್ ಔಟ್ ಆಗಿದ್ದಾರೆ.
ನಂತರ ಬ್ಯಾಟಿಂಗ್ ಮಾಡಿದ ಕೇರಳ ಮಹಿಳಾ ತಂಡ ಒಂದೇ ಎಸೆತದಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ನಾಗಲ್ಯಾಂಡ್ ನ ಆರಂಭಿಕ ಬೌಲರ್ ದೀಪಿಕಾ ಕೈಂತುರಾ ಮೊದಲ ಎಸತೆವನ್ನು ವೈಡ್ ಹಾಕಿದರು. ನಂತರದ ಎಸೆತದಲ್ಲಿ ಕೇರಳದ ಅಂಶು ಎಸ್. ರಾಜು ಚೆಂಡನ್ನು ಬೌಂಡರಿಗಟ್ಟುವ ಮೂಲಕ ನಾಲ್ಕು ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.