ಟೀಂ ಇಂಡಿಯಾದ ಖ್ಯಾತ ಬೌಲರ್ ರವಿಚಂದ್ರನ್ ಅಶ್ವಿನ್ ವೇಗವಾಗಿ 300 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆ ಬರೆಯಲಿದ್ದಾರೆ. ಅಂತಹ ಅಶ್ವಿನ್ ಹೆಚ್ಚು ಬಾರಿ ಔಟ್ ಮಾಡಿದ ಬ್ಯಾಟ್ಸ್ ಮನ್ ಶ್ರೀಲಂಕಾ ಆಟಗಾರ.
ಪ್ರವಾಸಿ ಶ್ರೀಲಂಕಾ ತಂಡ ಭಾರತದಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡುತ್ತಿದ್ದು ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್ ಮನ್ ಲಾಹಿರು ತಿರಿಮನ್ನೆ ಅವರನ್ನು ಔಟ್ ಮಾಡುವ ಮೂಲಕ 12ನೇ ಬಾರಿಗೆ ಅವರನ್ನು ಔಟ್ ಮಾಡಿದ ಕೀರ್ತಿ ಪಡೆದಿದ್ದಾರೆ.
ಲಾಹಿರು ತಿರಿಮನ್ನೆಯನ್ನು ಬಿಟ್ಟರೆ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇದ್ದಾರೆ. ಅಶ್ವಿನ್ ವಾರ್ನರ್ ರನ್ನು 11 ಬಾರಿ ಔಟ್ ಮಾಡಿದ್ದಾರೆ.
ಇನ್ನು ಇಂಗ್ಲೆಂಡ್ ನ ಅಲಿಸ್ಟರ್ ಕುಕ್, ಬೆನ್ ಸ್ಟೋಕ್ಸ್ ಮತ್ತು ವೆಸ್ಟ್ ಇಂಡೀಸ್ ನ ಆಟಗಾರ ಡರ್ರೆನ್ ಬ್ರಾವೊ ಅವರನ್ನು 9 ಬಾರಿ ಔಟ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಒಟ್ಟಾರೆ 8 ಬಾರಿ ಅಶ್ವಿನ್ ಔಟ್ ಮಾಡಿದ್ದಾರೆ.