ಟೀಂ ಇಂಡಿಯಾ 
ಕ್ರಿಕೆಟ್

ನಾಗ್ಪುರ ಟೆಸ್ಟ್: ಲಂಕಾ ವಿರುದ್ಧ 384 ರನ್ ಮುನ್ನಡೆ, ಗೆಲುವಿನ ಹೊಸ್ತಿಲಿನಲ್ಲಿ ಭಾರತ

ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 610 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ...

ನಾಗ್ಪುರ: ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 610 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. 
ನಾಗ್ಪುರದ ವಿದರ್ಭ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 610 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದು 405 ರನ್ ಮುನ್ನಡೆ ಸಾಧಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾಗೆ ಆರಂಭಿಕ ಆಘಾತ ಎದುರಾಗಿದ್ದು ಎರಡನೇ ಎಸತದಲ್ಲೇ ಸಮರವಿಕ್ರಮಾ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮೂರನೇ ದಿನದ ಅಂತ್ಯಕ್ಕೆ ಲಂಕಾ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದ್ದು ಕರುಣರತ್ನೆ ಅಜೇಯ 11 ಹಾಗೂ ತಿರಿಮನ್ನೆ 9 ರನ್ ಗಳಿಸಿ ನಾಲ್ಕನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ.  
ಭಾರತ ಪರ ಕೆಎಲ್ ರಾಹುಲ್ 7, ಮುರಳಿ ವಿಜಯ್ 128, ಚೇತೇಶ್ವರ ಪೂಜಾರ 143, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 213 ಹಾಗೂ ರೋಹಿತ್ ಶರ್ಮಾ ಅಜೇಯ 102 ರನ್ ಗಳಿಸಿದ್ದಾರೆ. ಲಂಕಾ ಪರ ಬೌಲಿಂಗ್ ನಲ್ಲಿ ಪೆರೆರಾ 3, ಘಮಗೆ, ಹೆರಾತ್, ಶನಕ ತಲಾ 1 ವಿಕೆಟ್ ಪಡೆದಿದ್ದಾರೆ. 
ಲಂಕಾ ಪರ ಲಂಕಾ ಪರ ಕರುಣರತ್ನೆ 51, ಚಾಂಡಿಮಲ್ 57, ಡಿಕ್ಲೆಲ್ಲಾ 24 ಹಾಗೂ ಪೆರೆರಾ 15 ರನ್ ಗಳಿಸಿ ಔಟಾಗಿದ್ದಾರೆ. ಭಾರತ ಪರ ಆರ್ ಅಶ್ವಿನ್ 4, ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT