ಭಾರತೀಯ ಕ್ರಿಕೆಟಿಗರ ಸಂಭಾವನೆ ಹೆಚ್ಚಳಕ್ಕೆ ವಿರಾಟ್ ಕೊಹ್ಲಿ ಬೇಡಿಕೆ
ಭಾರತೀಯ ಕ್ರಿಕೆಟಿಗರ ಸಂಭಾವನೆ ಹೆಚ್ಚಳ ಮಾಡುವಂತೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮನವಿ...
ನಾಗ್ಪುರ: ಭಾರತೀಯ ಕ್ರಿಕೆಟಿಗರ ಸಂಭಾವನೆ ಹೆಚ್ಚಳ ಮಾಡುವಂತೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮನವಿ ಮಾಡಿದ್ದಾರೆ.
ಬಿಸಿಸಿಐ ಹಾಗೂ ಕ್ರಿಕೆಟಿಗರ ನಡುವಣ ಮಹತ್ವದ ಗುತ್ತಿಗೆ ಒಪ್ಪಂದ ಮಾತುಕತೆ ಈ ವಾರ ನಡೆಯಲಿದ್ದು ಬೆಳೆಯುತ್ತಿರುವ ಕ್ರಿಕೆಟ್ ಸಂಪತ್ತಿನ ಹೆಚ್ಚಿನ ಪಾಲನ್ನು ಆಟಗಾರರಿಗೆ ಹಂಚುವಂತೆ ವಿರಾಟ್ ಕೊಹ್ಲಿ ಬಿಸಿಸಿಐಗೆ ಬೇಡಿಕೆ ಇಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ.
ಟಾಪ್ ಆಟಗಾರರಿಗೆ ತಮ್ಮ ಮೂಲಭೂತ ಒಪ್ಪಂದಗಳನ್ನು ಈ ವರ್ಷದಲ್ಲಿ 3 ಲಕ್ಷ ಅಮೆರಿಕನ್ ಡಾಲರ್ ಗಳಿಗೆ ದ್ವಿಗುಣಗೊಳಿಸಲಾಗುವುದು. 2018ರಿಂದ 2022ರ ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಸಾರದ ಹಕ್ಕಿಗೆ ಸಂಬಂಧಿಸಿದಂತೆ ಸ್ಟಾರ್ ಇಂಡಿಯಾ ಜತೆ ಬಿಸಿಸಿಐ 2.5 ಬಿಲಿಯನ್ ಅಮೆರಿಕನ್ ಡಾಲರ್ ನ ಬೃಹತ್ ಒಪ್ಪಂದವನ್ನು ಮಾಡಿಕೊಂಡಿದೆ.
ಬಿಸಿಸಿಐ ಆಡಳಿತಾಧಿಕಾರಿ ವಿನೋಯ್ ರಾಯ್ ಜತೆ ದೆಹಲಿಯಲ್ಲಿ ಇದೇ ಶುಕ್ರವಾರ ಮಾತುಕತೆ ನಡೆಯಲಿದ್ದು ಈ ವೇಳೆ ಮಹೇಂದ್ರ ಸಿಂಗ್ ಧೋನಿ ಹಾಗೂ ರವಿಶಾಸ್ತ್ರಿ ಸಹ ಭಾಗಿಯಾಗಲಿದ್ದಾರೆ.