ಜಸ್ ಪ್ರೀತ್ ಬೂಮ್ರಾ, ಆಶಿಶ್ ನೆಹ್ರಾ
ರಾಂಚಿ: ಕ್ರಿಕೆಟ್ ನಲ್ಲಿ ಅಪಾರ ಅನುಭವ ಹೊಂದಿರುವ ವೇಗಿ ಆಶಿಶ್ ನೆಹ್ರಾ ಅವರೊಂದಿಗೆ ಆಡುವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಡೆತ್ ಬೌಲ್ ಸ್ಪೆಷಲಿಸ್ಟ್ ಬಲಗೈ ವೇಗಿ ಜಸ್ ಪ್ರೀತ್ ಬೂಮ್ರಾ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ನಾಳೆಯಿಂದ ಆರಂಭಗೊಳ್ಳಲಿದೆ. ಇನ್ನು ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರ ಆಶಿಶ್ ನೆಹ್ರಾ ಅವರ ಪುನರಾಗಮನವಾಗಿದೆ. ಅಪಾರ ಅನುಭವ ಹೊಂದಿರುವ ನೆಹ್ರಾರಿಂದ ಕ್ರಿಕೆಟ್ ಪಾಠ ಕಲಿಯುವುದಕ್ಕೆ ಹೆಚ್ಚು ಉತ್ಸುಕನಾಗಿದ್ದೇನೆ ಬೂಮ್ರಾ ಹೇಳಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿ ಅವರಂತ ಅನುಭವಿ ನಾಯಕತ್ವದಲ್ಲಿ ಆಡಿರುವ ಆಶಿಶ್ ನೆಹ್ರಾ ಅವರಿಂದ ಕೆಲ ಉಪಯುಕ್ತ ಸಲಹೆ ಸಿಗಬಹುದು ಎಂಬ ಭರವಸೆ ವ್ಯಕ್ತಪಡಿಸಿದರು.
ಟಿ20 ಪಂದ್ಯ ನಡೆಯುವ ಸ್ಥಳಗಳು:
ಅಕ್ಟೋಬರ್ 7ರಂದು ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ ರಾಂಚಿ.
ಅಕ್ಟೋಬರ್ 10ರಂದು ಬರ್ಸಾಪುರಾ ಕ್ರೀಡಾಂಗಣ ಗುವಾಹಟಿ.
ಅಕ್ಟೋಬರ್ 13ರಂದು ರಾಜೀವ್ ಗಾಂಧಿ ಕ್ರೀಡಾಂಗಣ ಹೈದರಾಬಾದ್.