ಗುವಾಹಟಿ: ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ 118 ರನ್ ಗಳಿಗೆ ಆಲೌಟ್ ಆಗಿದೆ.
ಗುವಾಹಟಿಯ ಬರ್ಸಪಾರ ಕ್ರೀಡಾಂಗಣದಲ್ಲಿ ಇದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 118 ರನ್ ಗಳಿಗೆ ಆಲೌಟ್ ಆಗಿದ್ದು ಆಸ್ಟ್ರೇಲಿಯಾಗೆ ಗೆಲ್ಲಲು 119 ರನ್ ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 8, ಶಿಖರ್ ಧವನ್ 2, ವಿರಾಟ್ ಕೊಹ್ಲಿ 0, ಮನೀಶ್ ಪಾಂಡೆ 6, ಕೇದಾರ್ ಜಾದವ್ 27, ಎಂಎಸ್ ಧೋನಿ 13, ಹಾರ್ದಿಕ್ ಪಾಂಡ್ಯಾ 25, ಭುವನೇಶ್ವರ್ ಕುಮಾರ್ 1, ಕುಲದೀಪ್ ಯಾದವ್ 16, ಜಸ್ ಪ್ರೀತ್ ಬೂಮ್ರಾ 7 ಹಾಗೂ ಚಹಾಲ್ ಅಜೇಯ 3 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರ ಬೆಹೆಂಡ್ರೋರ್ಫ್ 4, ಜಂಪಾ 2, ಸ್ಟೈನಿಸ್, ಟೈ ತಲಾ 1 ವಿಕೆಟ್ ಪಡೆದಿದ್ದಾರೆ.