ರಿವ್ಯೂ ತಪ್ಪಿಸಿಕೊಂಡ ಧೋನಿ 
ಕ್ರಿಕೆಟ್

2ನೇ ಟಿ20: ಮೊದಲ ಬಾರಿಗೆ ಡಿಆರ್ ಎಸ್ ನಲ್ಲಿ ಎಡವಿದ ಧೋನಿ, ವಿರಾಟ್ ಕೊಹ್ಲಿ!

ಆಸ್ಟ್ರೇಲಿಯಾ ವಿರುದ್ಧದ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡಕ್ಕೆ ಅದೃಷ್ಟ ಕೂಡ ಜೊತೆಯಾಗಿತ್ತು. ಆದರೆ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ನೊಂದಿಗೆ ಅದೃಷ್ಟ ಕೂಡ ಕೈಕೊಟ್ಟಿತ್ತು ಎನ್ನಬಹುದು..

ಗುವಾಹತಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡಕ್ಕೆ ಅದೃಷ್ಟ ಕೂಡ ಜೊತೆಯಾಗಿತ್ತು. ಆದರೆ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ನೊಂದಿಗೆ ಅದೃಷ್ಟ ಕೂಡ ಕೈಕೊಟ್ಟಿತ್ತು ಎನ್ನಬಹುದು..

ಆಸಿಸ್ ವಿರುದ್ಧ ಸರಣಿ ಮಾತ್ರವಲ್ಲ ಇತರೆ ಸರಣಿಗಳಲ್ಲಿಯೂ ಭಾರತದ ರಿವ್ಯೂ ಆಯ್ಕೆ ಅಮೋಘವಾಗಿತ್ತು. ಅದಕ್ಕೆ ಕಾರಣ ಮಾಜಿ ನಾಯಕ ಎಂಎಸ್ ಧೋನಿ..ಧೋನಿ ರಿವ್ಯೂ ಪಡೆದ ಪ್ರತೀಭಾರಿಯ ಫಲಿತಾಂಶವೂ ಭಾರತದ ಪರವಾಗಿತ್ತು. ಅಷ್ಟು ಕರಾರುವಕ್ಕಾಗಿ ಔಟ್ ಅಥವಾ ನಾಟ್ ಔಟ್ ಅನ್ನು ಧೋನಿ ಗುರುತಿಸುತ್ತಿದ್ದರು. ಇದೇ ಕಾರಣಕ್ಕೆ ಡಿಆರ್ ಎಸ್ ಅನ್ನು ಡಿಸಿಷನ್ ರಿವ್ಯೂ ಸಿಸ್ಟಮ್ ಬದಲಿಗೆ ಧೋನಿ ರಿವ್ಯೂ ಸಿಸ್ಟಮ್ ಎಂದು ಕರೆಯುತ್ತಿದ್ದರು.

ಆದರೆ ಇಂದಿನ ಪಂದ್ಯದಲ್ಲಿ ಮಾತ್ರ ಧೋನಿ ಕೊಂಚ ಗೊಂದಲಕ್ಕೆ ಒಳಗಾದಂತೆ ಕಂಡುಬಂದರು. ರಿವ್ಯೂ ಪಡೆಯುವ ಗೊಂದಲದಿಂದಾಗಿ ಜೀವದಾನ ಪಡೆದ ಆಸಿಸ್ ತಂಡದ ಹೆನ್ರಿಕ್ಸ್ ಭರ್ಜರಿ ಆಟವಾಡಿದರು. ಕೇವಲ 46 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 62 ರನ್ ಸಿಡಿಸಿದರು.

ಇದೇ ಹೆನ್ರಿಕ್ಸ್ ಇನ್ನಿಂಗ್ಸ್ ನ ಐದನೇ ಓವರ್ ನಲ್ಲೇ ಔಟ್ ಆಗಿದ್ದರು..ಹೌದು.. ಭುವನೇಶ್ವರ್ ಕುಮಾರ್ ಎಸೆದ ಐದನೇ ಓವರ್ ನ ಐದನೇ ಎಸೆತದಲ್ಲಿ ಹೆನ್ರಿಕ್ಸ್ ಬ್ಯಾಟ್ ಅಂಚು ಸವರಿದ್ದ ಚೆಂಡು ಧೋನಿ ಕೈ ಸೇರಿತ್ತು. ವಿರಾಟ್ ಕೊಹ್ಲಿ ಮತ್ತು ಬೌಲರ್ ಭುವಿ ಆತ್ಮವಿಶ್ವಾಸದಿಂದಲೇ ಔಟ್ ಗೆ ಅಪೀಲ್ ಮಾಡಿದರು. ಆದರೆ ವಿಕೆಟ್ ಹಿಂದೆ ನಿಂತಿದ್ದ ಧೋನಿ ಮಾತ್ರ ಔಟ್ ಮತ್ತು ನಾಟ್ ಔಟ್ ಗೊಂದಲದಲ್ಲಿದ್ದರು. ಅಂತಿಮವಾಗಿ ನಾಟ್ ಔಟ್ ಆಗಿರಬಹುದು ಎಂದು ತೀರ್ಮಾನಿಸಿ ಡಿಆರ್ ಎಸ್ ಬೇಡ ಎಂದು ನಿರ್ಧರಿಸಿದರು. ಕೊಹ್ಲಿ ಕೂಡ ಧೋನಿ ಮಾತಿಗೆ ತಲೆಯಾಡಿಸಿದರು.

ಆದರೆ ಬಳಿರ ರೀಪ್ಲೇ ವೇಳೆ ಚೆಂಡು ಬ್ಯಾಟ್ ನ ಅಂಚನ್ನು ಸವರಿದ್ದು ಸ್ಪಷ್ಟವಾಗಿತ್ತು. ಸ್ನಿಕೋ ಮೀಟರ್ ನಲ್ಲೂ ಕೂಡ ಇದು ಸ್ಪಷ್ಟವಾಗಿತ್ತು. ಆದರೆ ಧೋನಿ ಮತ್ತು ಕೊಹ್ಲಿ ನಡುವಿನ ಗೊಂದಲದಿಂದಾಗಿ ಹೆನ್ರಿಕ್ಸ್ ಔಟ್ ನಾಟ್ ಔಟ್ ಆಯಿತು..

ಬಹುಶಃ ಅದೇ ಓವರ್ ನಲ್ಲಿ ಹೆನ್ರಿಕ್ಸ್ ಔಟ್ ಆಗಿದ್ದರೆ, ಪಂದ್ಯ ಫಲಿತಾಂಶ ಬೇರೆಯಾಗಿರುತ್ತಿತ್ತೇನೋ...!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!