ಬೆಂಗಳೂರು: ಕನ್ನಡಿಗ ಕ್ರಿಕೆಟ್ ಪಟು ರಾಬಿನ್ ಉತ್ತಪ್ಪ ತಂದೆಯಾಗಿದ್ದಾರೆ. ಉತ್ತಪ್ಪ ಅವರ ಪತ್ನಿ ಶೀತಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಬಿನ್ ಉತ್ತಪ್ಪ, ತಾಯಿ, ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.
ಈ ಬಾರಿಯ ರಣಜಿ ಟ್ರೋಫಿಯಲ್ಲಿ ರಾಬಿನ್ ಉತ್ತಪ್ಪ ಅವರು ಸೌರಾಷ್ಟ್ರ ಪರವಾಗಿ ಆಡಲಿದ್ದಾರೆ.