ಬೀದಿ ಕಾಳಗದಿಂದ ಬೆನ್ ಸ್ಟೋಕ್ಸ್ ವೃತ್ತಿ ಬದುಕಿಗೆ ದೊಡ್ಡ ಹೊಡೆತ!
ಬೀದಿ ಕಾಳಗದ ನಂತರ ಸದ್ಯ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ...
ಲಂಡನ್: ಬೀದಿ ಕಾಳಗದ ನಂತರ ಸದ್ಯ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ.
ಅಮೆರಿಕದ ನ್ಯೂ ಬ್ಯಾಲೆನ್ಸ್ ಕ್ರೀಡಾ ಉತ್ಪನ್ನಗಳ ಸಂಸ್ಥೆ ಬೆನ್ ಸ್ಟೋಕ್ಸ್ ಜತೆ ಮಾಡಿಕೊಂಡಿದ್ದ ಪ್ರಾಯೋಜಕತ್ವದ ಒಪ್ಪಂದವನ್ನು ರದ್ದುಗೊಳಿಸಿದೆ.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯೂ ಬ್ಯಾಲೆನ್ಸ್ ಬೆನ್ ಸ್ಟೋಕ್ಸ್ ರಂತಾ ಆಟಗಾರರಿಂದ ಈ ರೀತಿಯ ವರ್ತನೆಯನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ.
ಬ್ರಿಸ್ಬೆನ್ ನಲ್ಲಿ ನೈಟ್ ಬಾರ್ ವೊಂದರ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸ್ಟೋಕ್ಸ್ ಗುರಯಾಗಿದ್ದರು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಬಿಡುಗಡೆಯಾಗಿದ್ದರು. ಇನ್ನು ಈ ಕೃತ್ಯದಿಂದ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಆ್ಯಷಸ್ ಸರಣಿಯಿಂದ ಹೊರ ಬಿದ್ದಿದ್ದಾರೆ.