ಸಂಗ್ರಹ ಚಿತ್ರ 
ಕ್ರಿಕೆಟ್

ಐಸಿಸಿ ಏಕದಿನ ರ್ಯಾಂಕಿಂಗ್: ಭಾರತ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಅನ್ನು ಪ್ರಕಟಿಸಿದ್ದು, ನೂತನ ಪಟ್ಟಿಯ ಅನ್ವಯ ಅಗ್ರ ಸ್ಥಾನದಲ್ಲಿದ್ದ ಭಾರತ ತಂಡ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಅನ್ನು ಪ್ರಕಟಿಸಿದ್ದು, ನೂತನ ಪಟ್ಟಿಯ ಅನ್ವಯ ಅಗ್ರ ಸ್ಥಾನದಲ್ಲಿದ್ದ ಭಾರತ ತಂಡ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ರೇಟಿಂಗ್ಸ್ ನಲ್ಲಿ ಸಮಬಲ ಸಾಧಿಸಿದ್ದು ಎರಡೂ ತಂಡಗಳು ತಲಾ 120 ರೇಟಿಂಗ್ಸ್ ಅಂಕಗಳನ್ನು ಹೊಂದಿದೆ. ಆದರೆ ಅಂಕಗಳಿಕೆಯಲ್ಲಿ ಭಾರತಕ್ಕಿಂತ ದಕ್ಷಿಣ ಆಫ್ರಿಕಾ ತಂಡ ಮುಂದಿದ್ದು,  ಒಟ್ಟು 6, 244 ಅಂಕಗಳೊಂದಿಗೆ ಆಫ್ರಿಕನ್ನರು ಆಗ್ರ ಸ್ಥಾನಕ್ಕೇರಿದ್ದಾರೆ. ಎರಡನೇ ಸ್ಥಾನದಲ್ಲಿರುವ ಭಾರತ ಒಟ್ಟು 5,993 ಅಂಕಗಳನ್ನು ಹೊಂದಿದ್ದು, ಆಫ್ರಿಕಾಗಿಂತ ಕೇವಲ 251 ಅಂಕಗಳಷ್ಟು ಹಿಂದಿದೆ. ಪ್ರಸ್ತುತ ಬಾಂಗ್ಲಾದೇಶದ ವಿರುದ್ಧ  ನಡೆಯುತ್ತಿರುವ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಪ್ರದರ್ಶನ ತೋರುತ್ತಿರುವುದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ನೆರವಾಗಿದೆ.
ಇನ್ನು ಭಾರತ ಕೂಡ ಇದೇ ವಾರಾಂತ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಾಡಲಿದ್ದು, ಮತ್ತೆ ಅಗ್ರ ಸ್ಥಾನ ಪಡೆಯಲು ಕಿವೀಸ್ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಬೇಕಿದೆ. ಇದೇ ಅಕ್ಟೋಬರ್ 22ರಿಂದ ನ್ಯೂಜಿಲೆಂಡ್  ವಿರುದ್ಧದ ಏಕದಿನ ಸರಣಿ ಆರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇವೇಗೌಡರ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು: ಆತಂಕ ಪಡುವ ಅಗತ್ಯವಿಲ್ಲ ಎಂದ ಹೆಚ್​​ಡಿ ಕುಮಾರಸ್ವಾಮಿ, ಆಸ್ಪತ್ರೆ ಬುಲೆಟಿನ್ ಬಿಡುಗಡೆ

ಮತ್ತೆ ಕೋವಿಡ್ ಅಬ್ಬರ: ಆಂಧ್ರದಲ್ಲಿ ನಾಲ್ವರು ಬಲಿ; ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ!

ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ Sir Garry Sobers ನಿಧನ, 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್!

ಯಲಹಂಕದಲ್ಲಿ ಭೀಕರ ಅಪಘಾತ, ಟ್ಯಾಂಕರ್ ಢಿಕ್ಕಿ,: ಶಾಲೆಗೆ ಮೊಮ್ಮಕ್ಕಳ ಬಿಡಲು ಹೋಗಿದ್ದ ವೃದ್ಧ ದಾರುಣ ಸಾವು! Video

'ಭೂಮಿ ಮೇಲಿನ ಎಲ್ಲರೂ ಹಿಂದೂಗಳೇ, ಧರ್ಮ ಬದಲಾವಣೆ ತಂದೆ ಬದಲಿಸಿದಂತೆ': ಆಟೋ ಮೇಲಿನ ಬರಹ ವೈರಲ್, ಚಾಲಕನಿಗೆ ಬೆದರಿಕೆ!