ಕ್ರಿಕೆಟ್

ಐಸಿಸಿ ಏಕದಿನ ರ್ಯಾಂಕಿಂಗ್, ಮತ್ತೆ ಅಗ್ರಸ್ಥಾನಕ್ಕೇರಿದ ಡಿ ವಿಲ್ಲಿಯರ್ಸ್

Raghavendra Adiga
ದುಬೈ: ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿ ಡಿ ವಿಲ್ಲಿಯರ್ಸ್ ಐಸಿಸಿ ಏಕದಿನ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನ ಪಡೆದಿದ್ದಾರೆ.
ಪಾಲ್ಲ್, ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 15 ಫೋರ್ ಮತ್ತು 7 ಸಿಕ್ಸರ್ ಗಳನ್ನು ಒಳಗೊಂಡು ಡಿ ವಿಲ್ಲಿಯರ್ಸ್ 176 ರನ್ ಗಳಿಸಿದ್ದರು, 104 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದ್ದರು. ಇಷ್ಟೇ ಅಲ್ಲದ ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ದ. ಆಫ್ರಿಕಾ 2-0 ಮುನ್ನಡೆ ಗಳಿಸಿಕೊಂಡು  ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಏರಿತ್ತು. ತಂಡದ  ಈ ಸಾಧನೆಗೆ ಸಹ ಡಿ ವಿಲ್ಲಿಯರ್ಸ್ರ ನೆಅವು ಅತ್ಯಂತ ಅಮೂಲ್ಯವಾಗಿದೆ..
ದಕ್ಷಿಣ ಆಫ್ರಿಕಾದ-ಬಾಂಗ್ಲಾದೇಶ ಸರಣಿಯ ಮೊದಲ ಎರಡು ಪಂದ್ಯಗಳು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುತ್ತಿರುವ ಪಾಕಿಸ್ತಾನ-ಶ್ರೀಲಂಕಾ ಸರಣಿಯ ಮೊದಲ ಮೂರು ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು  ಶ್ರೇಯಾಂಕಗಳನ್ನು ನೀಡಲಾಗಿದೆ. 
ಡಿ ವಿಲ್ಲಿಯರ್ಸ್ ತಮ್ಮ ವೃತ್ತಿ ಜೀವನದಲ್ಲಿ 14 ನೇ ಬಾರಿಗೆೀ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲ ಬಾರಿಗೆ ಮೇ 30, 2010 ರಂದು ಅಗ್ರ ಸ್ಥಾನ ಪಡೆದಿದ್ದರು. ವಿಂಡೀಸ್ ನ ನಿವೃತ್ತ  ಬ್ಯಾಟ್ಸ್ ಮನ್ ವಿವಾನ್ ರಿಚರ್ಡ್ಸ್ ನಂತರ ಅತಿ ಹೆಚ್ಚು ದಿನಗಳ ಕಾಲ ಅಗ್ರ ಸ್ಥಾನದಲ್ಲಿದ್ದ ಕೀರ್ತಿ ಎಬಿಡಿ ಅವರದಾಗಿದೆ.
SCROLL FOR NEXT