ಇತ್ತೀಚಿನ ಸರಣಿಗಳಲ್ಲಿ ಉತ್ತಮ ಆಲ್ ರೌಂಡರ್ ಆಟ ಪ್ರದರ್ಶಿಸುತ್ತಿರುವ ಹಾರ್ದಿಕ್ ಪಾಂಡ್ಯ 2018 ರ ಐಪಿಎಲ್ ನಲ್ಲಿಯೂ ಆಡಲು ಉತ್ಸುಕರಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್ ನಲ್ಲಿ ಆಡಲು ಉತ್ಸುಕರಾಗಿರುವುದರ ಬಗ್ಗೆ ಬಿಸಿಸಿಐಗೂ ಮಾಹಿತಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಈಗಾಗಲೇ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಟೀಂ ಇಂಡಿಯಾ ಪರವಾಗಿ ಪಾಂಡ್ಯ ಇತ್ತೀಚಿನ ಸರಣಿಗಳಲ್ಲಿ ನೀಡಿರುವ ಪ್ರದರ್ಶನ ನೀಡುತ್ತಿರುವುದು ಐಪಿಎಲ್ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದ್ದು ಇದೇ ಕಾರಣಕ್ಕೆ ತಂಡದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿದೆ.
ಹಾರ್ದಿಕ್ ಪಾಂಡ್ಯ ಅವರ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಅವರ ತಂಡಕ್ಕೆ ಸೇರಿಸಿಕೊಳ್ಳಲು 2 ಕೋಟಿ ಖರ್ಚು ಮಾಡಿದ್ದ ತಂಡ ಈಗ ಹಾರ್ದಿಕ್ ಪಾಂಡ್ಯಾ ಅವರಿಗೆ ಮತ್ತಷ್ಟು ಆಕರ್ಷಕ ಆಫರ್ ನೀಡಬೇಕಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.