ಕಾನ್ಪುರ: ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್ ಗಳಿಂದ ಜಯ ಗಳಿಸುವ ಮೂಲಕ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 6 ರನ್ ಗಳಿಂದ ಮಣಿಸಿ ಪಂದ್ಯ ದಲ್ಲಿ ಗೆಲುವು ಸಾಧಿಸಿತು. ಟೀಂ ಇಂಡಿಯಾ ನೀಡಿದ 338 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಇನ್ನೇನು ಪಂದ್ಯದಲ್ಲಿ ಗೆಲುವು ಸಾಧಿಸಿ ಬಿಟ್ಟಿತ್ತು ಎನ್ನುವಷ್ಟರಲ್ಲಿ ಭುವನೇಶ್ವರ್ ಕುಮಾರ್ ನಿಕೋಲ್ಸ್ ರನ್ನು ಬೌಲ್ಡ್ ಮಾಡುವ ಮೂಲಕ ತಂಡಕ್ಕೆ ಕೊಂಚ ಚೇತರಿಕೆ ತಂದು ಕೊಟ್ಟರು. ನಂತರ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಲ್ಯಾಥಮ್ ರನ್ನು ಬುಮ್ರಾ ರನ್ ಮಾಡಿದ್ದು ಟೀಂ ಇಂಡಿಯಾ ಪಂದ್ಯ ಗೆಲ್ಲಲು ಕಾರಣವಾಯಿತು.
ನ್ಯೂಜಿಲೆಂಡ್ ಪರ ಮಾರ್ಟಿನ್ ಗುಪ್ಟಿಲ್ 10, ಮನ್ರೋ 75, ಕೇನ್ ವಿಲಿಯಮ್ಸನ್ 64, ಟೇಲರ್ 39, ಲ್ಯಾಥಮ್ 65 ರನ್ ಗಳಿಸಿದರು.
ಭಾರತ ಪರ ಜಸ್ ಪ್ರೀತ್ ಬುಮ್ರಾ 3, ಯಜುವೇಂದ್ರ ಚಹಲಾ 2 ಮತ್ತು ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾ ಪರ ಶಿಖರ್ ಧವನ್ 14, ರೋಹಿತ್ ಶರ್ಮಾ 147, ವಿರಾಟ್ ಕೊಹ್ಲಿ 113, ಹಾರ್ದಿಕ್ ಪಾಂಡ್ಯ 8, ಎಂಎಸ್ ಧೋನಿ 25 ರನ್ ಗಳಿಸಿದ್ದಾರೆ.
ನ್ಯೂಜಿಲೆಂಡ್ ಪರ ಟೀಮ್ ಸೌಥಿ, ಸ್ಯಾಂಟ್ನರ್ ಮತ್ತು ಮಿಲ್ನೆ ತಲಾ 2 ವಿಕೆಟ್ ಪಡೆದಿದ್ದಾರೆ.