ದುಬೈ: ಟೀಂ ಇಂಡಿಯಾದ ಡೆತ್ ಓವರ್ ಬೌಲರ್ ಖ್ಯಾತಿಯ ಜಸ್ ಪ್ರೀತ್ ಬೂಮ್ರಾ ಅಂತಾರಾಷ್ಟ್ರೀಯ ಟಿ20 ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿ ವೃತ್ತಿ ಬದುಕಿನ ಶ್ರೇಷ್ಠ ರ್ಯಾಂಕಿಂಗ್ ಸಾಧಿಸಿದ ಬುಮ್ರಾ ಒಂದು ಸ್ಥಾನ ಏರಿಕೆ ಕಾಣುವ ಮೂಲಕ ಟಿ20 ನಂಬರ್ 1 ಬೌಲರ್ ಎನಿಸಿಕೊಂಡಿದ್ದಾರೆ.
ಪಾಕಿಸ್ತಾನದ ಇಮಾದ್ ವಸೀಂ ಒಂದು ಸ್ಥಾನ ಕೆಳಗಿಳಿದಿದ್ದು ಬುಮ್ರಾ ಅಗ್ರಸ್ಥಾನಕ್ಕೇರಲು ಸಹಕಾರಿಯಾಯಿತು. ಇನ್ನು ಟಿ20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.