ರಹಕೀಮ್ ಕಾರ್ನ್ ವಾಲ್ 
ಕ್ರಿಕೆಟ್

ಅದ್ಭುತ ಬ್ಯಾಟಿಂಗ್ ನಡುವೆ ತನಗೆ ತಾನೇ ಔಟ್ ಘೋಷಿಸಿಕೊಂಡ ಕ್ರಿಕೆಟ್ ದೈತ್ಯ, ಕಾರಣ ಸಿಲ್ಲಿ!

ಕ್ರಿಕೆಟ್ ಜಗತ್ತಿನಲ್ಲಿ ದೈತ್ಯ ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಹಕೀಮ್ ಕಾರ್ನ್ ವಾಲ್ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭರ್ಜರಿ ಹೊಡೆತೆಗಳಿಗೆ...

ಕ್ರಿಕೆಟ್ ಜಗತ್ತಿನಲ್ಲಿ ದೈತ್ಯ ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಹಕೀಮ್ ಕಾರ್ನ್ ವಾಲ್ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭರ್ಜರಿ ಹೊಡೆತೆಗಳಿಗೆ ಹೆಸರುವಾಸಿಯಾಗಿರುವ ಕಾರ್ನ್ ವಾಲ್ ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್)ನಲ್ಲಿ ಭರ್ಜರಿ ಬ್ಯಾಟಿಂಗ್ ನಡುವೆ ತನಗೆ ತಾನೇ ಔಟ್ ಘೋಷಿಸಿಕೊಂಡು ಸುದ್ದಿಯಾಗಿದ್ದಾರೆ. 
ಬಾರ್ಬಡೋಸ್ ಟ್ರಿಡೆನ್ಟಸ್ ಮತ್ತು ಸೇಂಟ್ ಲೂಸಿಯಾ ಸ್ಟಾರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟ್ ಮಾಡಿದ್ದ ಟ್ರಿಡೆನ್ಟಸ್ 195 ರನ್ ಗಳನ್ನು ಪೇರಿಸಿತ್ತು. 196 ರನ್ ಗಳ ಗುರಿ ಬೆನ್ನಟ್ಟಿದ ಸ್ಟಾರ್ಸ್ ಪರ ಆಡುತ್ತಿದ್ದ ರಹಕೀಮ್ ಕಾರ್ನ್ ವಾಲ್ ಅದ್ಭುತವಾಗಿ ಆಡುತ್ತಿದ್ದರು. 44 ಎಸೆತಗಳಲ್ಲಿ 78 ರನ್ ಗಳಿಸಿದ್ದ ರಹಕೀಮ್ ಇನ್ನೇನು ತಂಡವನ್ನು ಗೆಲುವಿನ ದಡ ಮುಟ್ಟಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಸಿಂಗಲ್ ರನ್ ಓಡಲು ಸಾಧ್ಯವಾಗದ ಕಾರಣ ತನ್ನಷ್ಟಕ್ಕೆ ತಾನೇ ರಹಕೀಮ್ ಔಟ್ ಘೋಷಿಸಿಕೊಂಡು ಪೆವಿಲಿಯನ್ ಸೇರಿದರು. ಇದರಿಂದಾಗಿ ಸ್ಟಾರ್ಸ್ ತಂಡ 29 ರನ್ ಗಳಿಂದ ಸೋಲು ಕಾಣಬೇಕಾಯಿತು. 
ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಹಕೀಮ್ ಭರ್ಜರಿ 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿದ್ದರು. ತಂಡಕ್ಕೆ ಆಸರೆಯಾಗಿದ್ದ ರಹಕೀಮ್ ಪಂದ್ಯದ ನಡುವೆ ರೀಟೈಡ್ ಹೇಳಿದ್ದರು. ಆಗ ತಂಡಕ್ಕೆ ಗೆಲ್ಲಲು 17 ಎಸೆತಗಳಲ್ಲಿ 49 ರನ್ ಗಳ ಅವಶ್ಯಕತೆ ಇತ್ತು. ಇಂತಹ ಸಂದರ್ಭದಲ್ಲಿ ದೃಢವಾಗಿ ಆಡುತ್ತಿದ್ದ ಕಾರ್ನ್ ವಾಲ್ ರೀಟೈಡ್ ಘೋಷಿಸಿಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ರಹಕೀಮ್ ನಡೆಯನ್ನು ಟ್ವೀಟರಿಗರು ಟೀಕಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT