ಕ್ರಿಕೆಟ್

ಕೊಹ್ಲಿ ಅಬ್ಬರ, ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ

Raghavendra Adiga

ಕೊಲಂಬೊ: ಕೊನೆಯ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಭಾರತ ಸರಣಿಯಲ್ಲಿ 5ಕ್ಕೆ 5 ಪಂದ್ಯಗಳನ್ನು ಜಯಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಪ್ರಾರಂಭಿಸಿದ ಶ್ರೀಲಂಕಾ 239 ರನ್‌ಗಳ ಗುರಿ ನೀಡಿತು. ಆ ಗುರಿಯನ್ನು ಬೆನ್ನತ್ತಿದ ಟೀಮ್‌ ಇಂಡಿಯಾ ಆರಂಭಿಕ ಆಘಾತದ ನಡುವೆಯೂ ಭರ್ಜರಿ ಆಟವಾಡಿ 46. 3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 239 ರನ್‌ ಗಳಿಸಿತು.

ಅಜೇಯ 110 ರನ್‌ ಗಳಿಸಿದ ವಿರಾಟ್‌ ಕೋಹ್ಲಿ ತಂದವನ್ನುವಿಜಯಿಯಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇದು ಕೋಹ್ಲಿ ವೃತ್ತಿ ಬದುಕಿನ 30ನೇ ಶತಕವಾಗಿದೆ.

ಇದಕ್ಕೂ ಮುನ್ನ ಭಾರತ ತಂಡದ ನಿರಂತರ ಬೌಲಿಂಗ್‌ ದಾಳಿಗೆ ಕುಸಿದ ಆತಿಥೇಯ ಶ್ರೀಲಂಕಾ ತಂಡ ಐದನೇ ಏಕದಿನ ಪಂದ್ಯದಲ್ಲಿ 238 ರನ್‌ ಗಳಿಸಲಷ್ಟೇ ಯಶಸ್ವಿಯಾಗಿತ್ತು.

ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭುವನೇಶ್ವರ ಕುಮಾರ್ ಪಂದ್ಯ ಪುರುಷೋತ್ತಮ ಆದರೆ ಜಸ್ಪ್ರಿತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದೇ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಈ ಪಂದ್ಯದಲ್ಲಿ 100ನೇ ಸ್ಟಂಪಿಂಗ್‌ ಮಾಡುವ ಮೂಲಕ ದಾಖಲೆ ಬರೆದರು.




SCROLL FOR NEXT