ಟೀಂ ಇಂಡಿಯಾವನ್ನು ಊಹೆಗೂ ನಿಲುಕದಂತಾ ತಂಡವನ್ನಾಗಿ ಪರಿವರ್ತಿಸಲು ಬಯಸುತ್ತೇನೆ: ಕೊಹ್ಲಿ
2019ರ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಟೀಂ ಇಂಡಿಯಾವನ್ನು ಊಹೆಗೂ ನಿಲುಕದಂತಾ ತಂಡವನ್ನಾಗಿ ಪರಿವರ್ತಿಸಲು ಬಯಸುತ್ತೇನೆ ಎಂದು ಟೀಂ ಇಂಡಿಯಾ...
ಕೊಲಂಬೊ: 2019ರ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಟೀಂ ಇಂಡಿಯಾವನ್ನು ಊಹೆಗೂ ನಿಲುಕದಂತಾ ತಂಡವನ್ನಾಗಿ ಪರಿವರ್ತಿಸಲು ಬಯಸುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
2015ರ ವಿಶ್ವಕಪ್ ಬಳಿಕ ಟೀಂ ಇಂಡಿಯಾವನ್ನು ಒಂದು ಮಾದರಿಗೆ ಸೀಮಿತಗೊಳಿಸಬಹುದಿತ್ತು. ಆದರೆ ಮುಂದಿನ ವಿಶ್ವಕಪ್ ವೇಳೆಗೆ ತಂಡವನ್ನು ಯಾರೂ ಊಹಿಸಲು ಸಾಧ್ಯವಾಗದಂತೆ ಪರಿವರ್ತಿಸಲಾಗುವುದು ಎಂದರು.
ನಾನು ಟೀಂ ಇಂಡಿಯಾ ಸೀಮಿತ ಓವರ್ ತಂಡಕ್ಕೆ ನಾಯಕನಾದ ಬಳಿಕ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದೇನೆ. ತಂಡದಲ್ಲಿ ಮಧ್ಯಮ ಕ್ರಮಾಂಕದ ಬಗ್ಗೆ ಕೊಂಚ ಆತಂಕವಿದೆ. ಈ ಮಧ್ಯಮ ಕ್ರಮಾಂಕದ ಆಟಗಾರರು ಉತ್ತಮವಾಗಿ ಆಡಿದೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರ ಮೇಲೆ ಒತ್ತಡ ಕೊಂಚ ಕಡಿಮೆಯಾಗಬಹುದು ಎಂದರು.
ಇನ್ನು ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ತಂಡದಲ್ಲಿ ಕೆಲವೊಂದು ಪ್ರಯೋಗಳನ್ನು ಮಾಡಲಾಗಿತ್ತು. ಅಂತೆ ನಾವು ಲಂಕಾ ವಿರುದ್ಧದ ಐದು ಪಂದ್ಯಗಳನ್ನು ಗೆದ್ದು ಲಂಕಾ ತಂಡವನ್ನು ವೈಟ್ ವಾಷ್ ಮಾಡಿದ್ದೇವೆ ಎಂದರು.
ಕೆಎಲ್ ರಾಹುಲ್ ಅವರು ಒಂದು ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೇ ಇನ್ನೊಂದು ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕ ಮತ್ತೊಂದು ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರೇ, ಕೇದಾರ್ ಜಾದವ್ ಮತ್ತು ಮನೀಶ್ ಪಾಂಡೆ ಆಡಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.