ಕೊಲಂಬೊ: ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 15 ವಿಕೆಟ್ ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬೂಮ್ರಾಗೆ ಉಡುಗೊರೆಯಾಗಿ ಕಾರೊಂದನ್ನು ನೀಡಲಾಯಿತು. ಬಳಿಕ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಹ ಆಟಗಾರರನ್ನೆಲ್ಲಾ ಕೂರಿಸಿಕೊಂಡು ಮೈದಾನದ ಸುತ್ತ ಜಾಲಿ ರೈಡ್ ಮಾಡಿದರು.
ಎಂಎಸ್ ಧೋನಿ ಬಳಿ ದುಬಾರಿ ಕಾರು, ಬೈಕ್ ಗಳಿದ್ದು ಈ ಸಣ್ಣ ಕಾರಿನಲ್ಲಿ ಸುತ್ತಾಡಿದ್ದು ಎಲ್ಲರ ಗಮನ ಸೆಳೆಯಿತು.
ಈ ವಿಡಿಯೋ ಹಾಗೂ ಫೋಟೋಗಲು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.