ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಟಿ20 ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್?
ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಏಕೈಕ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ಆದರೆ ಈ ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್ ಆಗಿತ್ತೆ...
ಕೊಲಂಬೊ: ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಏಕೈಕ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ. ಆದರೆ ಈ ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್ ಆಗಿತ್ತೆ ಎಂಬ ಅನುಮಾನ ಇದೀಗ ಮೂಡ ತೊಡಗಿದೆ.
ಕ್ರಿಕೆಟ್ ನಲ್ಲಿ ಟಾಸ್ ಸಾಕಷ್ಟು ಬಾರಿ ಪಂದ್ಯದ ಫಲಿತಾಂಶದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಮೊನ್ನೆ ನಡೆದ ಟಿ20 ಪಂದ್ಯದಲ್ಲೂ ಟಾಸ್ ಮಹತ್ತರ ಪಾತ್ರ ವಹಿಸಿತ್ತು ಎಂದೇ ಹೇಳಬಹುದಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ತುಗೊಂಡಿತ್ತು. ಆದರೆ ನಿಜಕ್ಕೂ ಟಾಸ್ ಗೆದ್ದಿದ್ದು ಶ್ರೀಲಂಕಾ.
ಟಾಸ್ ವೇಳೆ ಮಾಜಿ ಆಟಗಾರ ಮುರುಳಿ ಕಾರ್ತಿಕ್ ಉಭಯ ತಂಡದ ಆಟಗಾರರಿಗೆ ಔಪಚಾರಿಕವಾಗಿ ಮ್ಯಾಚ್ ರೆಫ್ರಿ ಆ್ಯಂಡಿ ಪೇಕ್ರಾಫ್ಟ್ ಎದುರು ಟಾಸ್ ಪರಿಚಯಿಸಿದರು.
ಲಂಕಾ ನಾಯಕ ಉಫುಲ್ ತರಂಗಾ ನಾಣ್ಯವನ್ನು ಟಾಸ್ ಮಾಡಿದರು. ಆಗ ಕೊಹ್ಲಿ ಹೆಡ್ಸ್ ಆಯ್ದುಕೊಂಡರು. ರೆಫ್ರಿ ಟೇಲ್ಸ್ ಇಂಡಿಯಾ ಎನ್ನುತ್ತಿದ್ತಂತೆ ಕಾರ್ತಿಕ್ ಟೀಂ ಇಂಡಿಯಾ ನಾಯಕನ ನಿರ್ಧಾರವನ್ನು ಕೇಳಿದ್ದಾರೆ.
ಉಭಯ ನಾಯಕರಾಗಲೀ ಅಥವಾ ರೆಫ್ರಿಯಾಗಲೀ ಈ ಬಗ್ಗೆ ಚಕಾರವೆತ್ತದಿರುವುದು ಟಾಸ್ ಬಗ್ಗೆ ಫಿಕ್ಸಿಂಗ್ ಆಗಿತ್ತಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.