ಪಾಕಿಸ್ತಾನ ಮಾಜಿ ನಾಯಕ ಶೋಯೆಬ್ ಮಲಿಕ್ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು 'ಲೆಜೆಂಡ್ ಗೋಟ್'(ಗ್ರೇಟೆಸ್ಟ್ ಆಫ್ ಆಲ್ ಟೈಮ್) ಎಂದು ಕರೆದಿದ್ದಾರೆ.
ಶೋಯೆಬ್ ಮಲಿಕ್ ಎಂಟು ವರ್ಷಗಳ ಬಳಿಕ ಇದೀಗ ಪಾಕಿಸ್ತಾನದಲ್ಲಿ ನಡೆಯುತ್ತಿರುವ 2017ರ ಇಂಡಿಪೆಂಡೆನ್ಸ್ ಕಪ್ ನ ವರ್ಡ್ಲ್ ಇಲೆವೆನ್ ತಂಡದ ವಿರುದ್ಧವಾಗಿ ಆಡುತ್ತಿದ್ದಾರೆ. ಈ ಮಧ್ಯೆ ಟ್ವೀಟರ್ ನಲ್ಲಿ ಬೆಂಬಲಿಗರ ಜತೆ ಪ್ರಶ್ನೋತ್ತರ ಆಡಿದ ಅವರು ಬೆಂಬಲಿಗರ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಓರ್ವ ಟ್ವೀಟರಿಗನು ಎಂಎಸ್ ಧೋನಿ ಕುರಿತಂತೆ ನಿಮಗೆ ಏನು ಅನಿಸುತ್ತದೆ ಎಂದು ಕೇಳಿದಾಗ ಅದಕ್ಕೆ ಮಲಿಕ್ ಧೋನಿ ಓರ್ವ 'ಲೆಜೆಂಡ್ ಗೋಟ್' ಟ್ವೀಟಿಸಿದ್ದಾರೆ. ಇದಕ್ಕೆ ಬೆಂಬಲಿಗರಷ್ಟೇ ಅಲ್ಲ ಧೋನಿ ಅಭಿಮಾನಿಗಳಿಂದಲೂ ಪ್ರಶಂಸೆ ಗಳಿಸಿದ್ದಾರೆ.
ಟಿ20 ಫಾರ್ಮೆಟ್ ನಲ್ಲಿ ಶೋಯೆಬ್ ಮಲಿಕ್ ಪಾಕಿಸ್ತಾನ ಪರ ಅತ್ಯಂತ ಹೆಚ್ಚು 1702 ರನ್ ಗಳಿಸಿದ ಆಟಗಾರನಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ 6ನೇ ಆಟಗಾರನಾಗಿದ್ದಾನೆ. ಬ್ರೆಂಡನ್ ಮೆಕ್ಲಮ್, ತಿಲಕರತ್ನೆ ದಿಲ್ಶಾನ್, ವಿರಾಟ್ ಕೊಹ್ಲಿ, ಮಾರ್ಟಿನ್ ಗುಪ್ಟಿಲ್ ಮತ್ತು ಮೊಹಮ್ಮದ್ ಶಾಹಜಾದ್ 1700 ರನ್ ಗಡಿ ದಾಟಿದ ಆಟಗಾರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics