ಕ್ರಿಕೆಟ್

'ಭಾರತ ಗೆಲ್ಲಲು ಮಳೆ ಬರಬೇಕಾಯಿತು': ಡೀನ್ ಜೋನ್ಸ್ ಟ್ವೀಟ್ ಗೆ ಅಭಿಮಾನಿಗಳ ತರಾಟೆ

Srinivasamurthy VN
ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಫಲಿತಾಂಶದ ಕುರಿತಂತೆ ಆಸಿಸ್ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಮಾಡಿರುವ ಒಂದು ಟ್ವೀಟ್ ಇದೀಗ ಭಾರತ ಕ್ರಿಕೆಟ್  ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ನಿನ್ನೆ ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾಗೆ ಗೆಲ್ಲಲು 281 ರನ್ ಗಳ ಗುರಿ ನೀಡಿತ್ತು. ಆದರೆ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮಾಡುವ ವೇಳೆ ದಿಢೀರ್ ಸುರಿದ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಿತು.  ಹೀಗಾಗಿ ಅಂಪೈರ್ ಗಳು ಡಕ್ವರ್ಥ್ ನಿಯಮದಡಿ ಆಸ್ಟ್ರೇಲಿಯಾಗೆ ಗೆಲ್ಲಲು 21 ಓವರ್ ಗಳಲ್ಲಿ 165 ರನ್ ಗಳ ಗುರಿ ನೀಡಿದರು. ಈ ಮೊತ್ತವನ್ನು ಮುಟ್ಟುವಲ್ಲಿ ವಿಫಲವಾದ ಸ್ಟೀವ್ ಸ್ಮಿತ್ ಪಡೆ ಭಾರತದ ಎದುರು 29 ರನ್ ಗಳ  ಅಂತರದಿಂದ ಸೋಲಿಗೆ ಶರಣಾಯಿತು.

ಪಂದ್ಯದ ಫಲಿತಾಂಶದ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ  ಪ್ರತಿಕ್ರಿಯೆ ಹಂಚಿಕೊಂಡಿದ್ದ ಮಾಜಿ ಆಟಗಾರ ಡೀನ್ ಜೋನ್ಸ್, ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲ್ಲಲು ಮಳೆಯೇ ಬರಬೇಕಾಯಿತು ಎಂದು ಟ್ವೀಟ್ ಮಾಡುವ ಮೂಲಕ  ಭಾರತದ ಗೆಲುವಿಗೆ ಮಳೆ ಕಾರಣ ಎಂದು ಟ್ವೀಟ್ ಮಾಡಿದ್ದರು. ಡೀನ್ ಜೋನ್ಸ್ ಅವರ ಟ್ವೀಟ್ ಗೆ ಕೆಂಗಣ್ಣು ಬೀರಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅವರದೇ ಧಾಟಿಯಲ್ಲಿ ತಿರುಗೇಟು ನೀಡಿದ್ದು, ಕ್ರಿಕೆಟ್ ನಿಯಮಾವಳಿ  ತಿಳಿಯದ ನೀವು ಕೂಡ ಕ್ರಿಕೆಟಿಗರೇ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಡೀನ್ ಜೋನ್ಸ್ ಟ್ವೀಟ್ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಯ ಟ್ವೀಟ್ ಗಳ ಸರಣಿ ಇಲ್ಲಿದೆ.
SCROLL FOR NEXT