ಕೋಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 252 ರನ್ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕವಾಗಿ ಉತ್ತಮ ರನ್ ಪೇರಿಸಿತು. ಆದರೆ ಕೊನೆಯ 10 ಓವರ್ ನಲ್ಲಿ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ ಬರೀ 48 ರನ್ ಮಾತ್ರ ಗಳಿಸಿದ್ದು ಸಾಧಾರಣ ಮೊತ್ತ ಪೇರಿಸಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 92 ರನ್ ಗಳನ್ನು ಪೇರಿಸಿದರು ತಂಡ ಸಾಧಾರಣ ಮೊತ್ತ ಪೇರಿಸಿದೆ. ಟೀಂ ಇಂಡಿಯಾ ಪರ ಅಜಿಂಕ್ಯ ರಹಾನೆ 55, ರೋಹಿತ್ ಶರ್ಮಾ 7, ವಿರಾಟ್ ಕೊಹ್ಲಿ 92, ಮನೀಷ್ ಪಾಂಡೆ 3, ಕೇದಾರ್ ಜಾದವ್ 24, ಎಂಎಸ್ ಧೋನಿ 5, ಹಾರ್ದಿಕ್ ಪಾಂಡ್ಯ 20, ಭುವನೇಶ್ವರ್ ಕುಮಾರ್ 20, ಕುಲ್ದೀಪ್ ಯಾದವ್ 0, ಚಹಾಲ್ 1 ಹಾಗೂ ಜಸ್ ಪ್ರೀತ್ ಬುಮ್ರಾ ಅಜೇಯ 10 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಪೈಕಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.