ಕ್ರಿಕೆಟ್

ಭಾರತೀಯರಿಗೆ ಹೆಮ್ಮೆ: ಅಮೆರಿಕದ ಸ್ಟೇಡಿಯಂಗೆ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಹೆಸರು

Vishwanath S
ಮುಂಬೈ: ಕ್ರಿಕೆಟ್ ದಿಗ್ಗಜ, ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರನ್ನು ಹೆಸರನ್ನು ಅಮೆರಿಕದಲ್ಲಿ ನಿರ್ಮಾಣವಾಗಿರುವ ನೂತನ ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಗುತ್ತದೆ. 
ಅಮೆರಿಕದ ಕೆಂಟುಕಿಯ ಲೂಯಿಸ್ ವಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಮುಂದಿನ ತಿಂಗಳು ಗಾವಸ್ಕರ್ ಅವರು ಉದ್ಘಾಟನೆ ಮಾಡಲಿದ್ದಾರೆ. ಆದರೆ ಕ್ರೀಡಾಂಗಣಕ್ಕೆ ಕ್ರಿಕೆಟ್ ದಿಗ್ಗಜನ ಹೆಸರನ್ನೇ ನಾಮಕರಣ ಮಾಡುತ್ತಾರೆ ಎಂದು ಮಂಡಳಿ ಹೇಳಿದೆ. 
ಭಾರತದಲ್ಲಿನ ಕ್ರೀಡಾಂಗಣಗಳಿಗೆ ಪ್ರಖ್ಯಾತ ರಾಜಕಾರಣಿಗಳು, ಗಣ್ಯರ ಹೆಸರನ್ನು ಇಡಲಾಗಿದೆ. ಅದರಲ್ಲಿ ಯಾವುದಾದರೂ ಒಂದು ಸ್ಟಾಂಡ್ ಗೆ ಕ್ರಿಕೆಟ್ ದಿಗ್ಗಜರ ಹೆಸರನ್ನು ನಾಮಕರಣ ಮಾಡಲಾಗಿದೆ. ಮುಂಬೈನಲ್ಲಿ ಸಚಿನ್ ಸ್ಟಾಂಡ್ ಹಾಗೂ ಕೋಲ್ಕತ್ತಾದಲ್ಲಿ ಸೌರವ್ ಗಂಗೂಲಿ ಸ್ಟಾಂಡ್ ಎಂದು ಹೆಸರಿಡಲಾಗಿದೆ. ಆದರೆ ಅಮೆರಿಕದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಸುನೀಲ್ ಗವಾಸ್ಕರ್ ಅವರ ಹೆಸರನ್ನು ಇಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. 
ಜಗತ್ತಿನಲ್ಲಿ ಕೇವಲ ಇಬ್ಬರು ಕ್ರಿಕೆಟ್ ದಿಗ್ಗಜರ ಹೆಸರಲ್ಲಿ ಮಾತ್ರ ಕ್ರಿಕೆಟ್ ಕ್ರೀಡಾಂಗಣಗಳು ಇವೆ. ಒಂದು ಕ್ರಿಕೆಟ್ ದಿಗ್ಗಜ ವಿವೀನ್ ರಿಚರ್ಡ್(ಸರ್ ವಿವೀನ್ ರಿಚರ್ಡ್ ಕ್ರೀಡಾಂಗಣ ಅನಿಟುಗಾ) ಮತ್ತು ಡೇರನ್ ಸಾಮಿ(ಡೇರನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಗ್ರೋಸ್ ಇಸ್ಲೆಟ್, ಸೆಂಟ್ ಲೂಸಿಯಾ) ನಂತರ ದ ಸ್ಥಾನದಲ್ಲಿ ಸುನೀಲ್ ಗವಾಸ್ಕರ್ ಇದ್ದಾರೆ. 
SCROLL FOR NEXT