ಇಂಡಿಯಾ ಕ್ರಿಕೆಟ್ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಇಂಡಿಯಾ ಮತ್ತು ಸೋನಿ ಪಿಕ್ಚರ್ಸ್ ಜತೆ ಈ ಬಾರಿ ಗೂಗಲ್, ಫೇಸ್ಬುಕ್ ರಿಲಯನ್ಸ್ ಜಿಯೋ ಸಹ ಬಿಡ್ ಮಾಡಲಿವೆ.
2023ರವರೆಗೆ ಅಂದರೆ ಐದು ವರ್ಷಗಳ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏಪ್ರಿಲ್ 3ರಂದು ನಡೆಸಲಿದೆ. ಇನ್ನು ಇದೇ ಮೊದಲ ಬಾರಿಗೆ ಗೂಗಲ್ ಭಾರತೀಯ ಕ್ರೀಡೆಯ ಪ್ರಸಾರ ಹಕ್ಕಿಗಾಗಿ ಬಿಡ್ ಮಾಡುತ್ತಿದೆ.
ಈ ಹಿಂದೆ ಫೇಸ್ ಬುಕ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎರಡು ತಿಂಗಳ ಪ್ರಸಾರ ಹಕ್ಕಿಗಾಗಿ ಬಿಡ್ ಮಾಡಿತ್ತು. ಆದರೆ ಹರಾಜು ಫೇಸ್ಬುಕ್ ಕೈತಪ್ಪಿ ಸ್ಟಾರ್ ಇಂಡಿಯಾ ಕೈ ಸೇರಿತ್ತು. ಇನ್ನು ರಿಲಯನ್ಸ್ ಜಿಯೋ 2018ರ ಪಿಯಾಂಗ್‌ಚಾಂಗ್ ವಿಂಟರ್ ಒಲಿಂಪಿಕ್ಸ್ ಕ್ರೀಡಾಕೂಟದ ಡಿಜಿಟಲ್ ಹಕ್ಕನ್ನು ಪಡೆದಿದ್ದು ಜಿಯೋ ಟಿವಿಯಲ್ಲಿ ಪ್ರಸಾರ ಮಾಡಿತ್ತು.
2018ರ ಏಪ್ರಿಲ್ 15ರಿಂದ 2013ರ ಮಾರ್ಚ್ 31ರವರೆಗಿನ ಇಂಡಿಯ ಕ್ರಿಕೆಟ್ ಪುರುಷರ ಮತ್ತು ಮಹಿಳೆ ಮತ್ತು ದೇಶೀ ಕ್ರಿಕೆಟ್ ಮೂರು ವಿಭಾಗದ ಪ್ರಸಾರ ಹಕ್ಕುಗಳ ಹರಾಜು ನಾಳೆ ಮಧ್ಯಾಹ್ನ 2 ಗಂಟೆಗೆ ಬಿಸಿಸಿಐ ನಡೆಸಲಿದೆ.