ಐಪಿಎಲ್ 2018: ರಾಹುಲ್ ಐತಿಹಾಸಿಕ ಅರ್ಧಶತಕ, ಪಂಜಾಬ್ ಗೆ 6 ವಿಕೆಟ್ ಜಯ
ಮೊಹಾಲಿ: ಕನ್ನಡಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ಅರ್ಧ ಶತಕದ ನೆರವಿನೊಡನೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 6 ವಿಕೆಟುಗಳ ಅಂತರದ ಗೆಲುವು ದಾಖಲಿಸಿದೆ.
ಪಂಜಾಬ್ ತಂಡಕ್ಕೆ ಈ ಸರಣಿಯಲ್ಲಿ ಇದು ಮೊದಲ ಜಯವಾಗಿದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 166/7 ರನ್ ಗಳಿಸಿತ್ತು. ಈ ಸವಾಲಿನ ಬೆನ್ನತ್ತಿದ ಪಂಜಾಬ್ ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ದಾಖಲಿಸಿದ ಕೆಎಲ್ ರಾಹುಲ್ (51) ಹಾಗೂ ಕರುಣ್ ನಾಯರ್ (50) ಅವರುಗಳ ಅತ್ಯುತ್ತಮ ಪ್ರದರ್ಶನದೊಡನೆ ಡೆಲ್ಲಿ ಗೆಲುವಿನ ಕನಸಿಗೆ ತಣ್ಣೀರೆರಚಿದೆ.
ರಾಹುಲ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಾಧನೆ ಮಾಡಿದ್ದು ಕರುಣ್ ನಾಯರ್ 31 ಎಸೆತಗಳಲ್ಲಿ ಐವತ್ತು ರನ್ ಕಲೆ ಹಾಕಿದ್ದರು.
ಇನ್ನು ಡೇವಿಡ್ ಮಿಲ್ಲರ್ (24*) ಹಾಗೂ ಮಾರ್ಕಸ್ ಸ್ಟೊಯಿನಿಸ್ (22*) ಉತ್ತಮ ರನ್ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ 18.5 ಓವರ್‌ಗಳಲ್ಲಿ ಪಂಜಾಬ್ ತಂಡವು 167/4 ರನ್ ಗಳಿಸಿ ಗುರಿ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಡೇರ್‌ಡೆವಿಲ್ಸ್ 166/7(20.0 ಓವರ್)
ಕಿಂಗ್ಸ್ ಇಲೆವೆನ್ ಪಂಜಾಬ್ 167/4 (18.5 ಓವರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics