ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಗೆಲುವಿನ ಸಂಭ್ರಮ 
ಕ್ರಿಕೆಟ್

ಐಪಿಎಲ್ 2018: ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ಕಿಂಗ್ಸ್​ ಇಲೆವೆನ್​ ಪಂಜಾಬ್ ಗೆಲುವು

ಐಪಿಎಲ್​ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ನಾಲ್ಕು ರನ್ ಗಳ....

ನವದೆಹಲಿ: ಐಪಿಎಲ್​ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ನಾಲ್ಕು ರನ್ ಗಳ ಗೆಲುವು ದಾಖಲಿಸಿದೆ.
ಇಂದು ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್​, ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 143 ರನ್​ ಸೇರಿಸಿತು. 
ಗೆಲುವಿಗೆ 144 ರನ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ, ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 139 ರನ್​ ಗಳಿಸುವ ಮೂಲಕ ಪಂಜಾಬ್​ ವಿರುದ್ಧ ಸೋಲು ಅನುಭವಿಸಿತು.
ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಪರ ಶ್ರೇಯಸ್‌ ಅಯ್ಯರ್‌ 57 ರನ್‌ ಗಳಿಸದರೂ ಜಯದ ಶ್ರೇಯಸ್ಸು ಮಾತ್ರ ಪಂಜಾಬ್‌ಗೆ ದಕ್ಕಿತು. 
ಪಂಜಾಬ್ ತಂಡದ ಪರ ಕರುಣ್​ ನಾಯರ್​(34), ಡೇವಿಡ್​ ಮಿಲ್ಲರ್​(26), ಲೋಕೇಶ್​ ರಾಹುಲ್​ (23) ಹಾಗೂ ಮಯಾಂಕ್​ ಅಗರ್​ವಾಲ್​(21) ರನ್​ ಕಾಣಿಕೆ ನಿಡಿದರು.
ಡೆಲ್ಲಿ ಪರ ಲಯಾಮ್​ ಪ್ಲಂಕೆಟ್​ 3 ವಿಕೆಟ್​ ಕಬಳಿಸಿದರೆ, ಟ್ರೆಂಟ್​ ಬೌಲ್ಟ್​ ಹಾಗೂ ಅವೇಶ್​ ಖಾನ್​ 2 ವಿಕೆಟ್​ ಪಡೆದರು. ಉಳಿದಂತೆ ಡೇನಿಯಲ್​ ಕ್ರಿಶ್ಚಿಯನ್​ ಒಂದು ವಿಕೆಟ್​ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್