ಕ್ರಿಕೆಟ್

ಐಪಿಎಲ್ 2018: ಆರ್ಸಿಬಿ ಸೋಲಿನ ನಡುವೆ ದಾಖಲೆಗಳನ್ನು ಸೃಷ್ಟಿಸುತ್ತಿರುವ ಎಬಿಡಿ ವಿಲಿಯರ್ಸ್

Vishwanath S
ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಸತತ ಸೋಲಿನಿಂದ ಕಂಗೆಟ್ಟಿದೆ. ಆದರೆ ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಮಾತ್ರ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. 
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್ 24 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು. ಈ ವೇಳೆ ಭರ್ಜರಿ 8 ಸಿಕ್ಸರ್ ಗಳನ್ನು ಎಬಿಡಿ ಸಿಡಿಸಿದ್ದರು. ಇದರಲ್ಲಿ ಒಂದು ಸಿಕ್ಸ್ ಮಾತ್ರ 111 ಮೀಟರ್ ದೂರಕ್ಕೆ ಸಿಡಿಸಿದ್ದು ಇದು ಐಪಿಎಲ್ ಇತಿಹಾಸದಲ್ಲಿ ಅತೀ ದೂರದ ಸಿಕ್ಸರ್ ಆಗಿದೆ. 
ಇನ್ನು ಐಪಿಎಲ್ 2018ರಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಎರಡನೇ ಆಟಗಾರನಾಗಿದ್ದಾರೆ. ಒಟ್ಟಾರೆ ಆರು ಇನ್ನಿಂಗ್ಸ್ ನಲ್ಲಿ ಎಬಿಡಿ ವಿಲಿಯರ್ಸ್ 280 ರನ್ ಗಳಿಸಿದ್ದಾರೆ. ಇನ್ನು 11ನೇ ಆವೃತ್ತಿಯಲ್ಲಿ ಒಟ್ಟಾರೆ 23 ಸಿಕ್ಸ್ ಬಾರಿಸಿದ್ದು 21 ಸಿಕ್ಸ್ ಬಾರಿಸಿರುವ ಕ್ರಿಸ್ ಗೇಯ್ಲ್ ಎರಡನೇ ಸ್ಥಾನದಲ್ಲಿದ್ದಾರೆ. 
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 205 ರನ್ ಪೇರಿಸಿತ್ತು. 206 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಗಳಿಂದ ಜಯ ಗಳಿಸಿತ್ತು.
SCROLL FOR NEXT