ಕೋಲ್ಕತ್ತಾ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2019ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಒಂದು ವರ್ಷ ಬಾಕಿ ಇರುವಂತೆ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಇಂಗ್ಲೆಂಡ್ ನಲ್ಲಿ ಮೇ 30 ರಿಂದ ಜುಲೈ 15ರವರೆಗೂ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಿದ್ಧತೆ ನಡೆಸಿದೆ. ಇನ್ನು ಟೂರ್ನಿಯಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಆಡಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ 10 ತಂಡಗಳು ಕಣದಲ್ಲಿವೆ.
ಜೂನ್ 05: ಟೀಂ ಇಂಡಿಯಾ ವರ್ಸಸ್ ದಕ್ಷಿಣ ಆಫ್ರಿಕಾ- ರೋಸ್ ಬೌಲ್, ಸೌತಾಂಪ್ಟನ್
ಜೂನ್ 09: ಟೀಂ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ- ಓವಲ್, ಲಂಡನ್
ಜೂನ್ 13: ಟೀಂ ಇಂಡಿಯಾ ವರ್ಸಸ್ ನ್ಯೂಜಿಲೆಂಡ್-ಟ್ರೆಂಟ್ ಬ್ರಿಡ್ಜ್, ನೋಟಿಂಗ್ಹಾಮ್
ಜೂನ್ 16: ಟೀಂ ಇಂಡಿಯಾ ವರ್ಸಸ್ ಪಾಕಿಸ್ತಾನ - ಓಲ್ಡ್ ಟ್ರಾಫೋರ್ಡ್, ಮ್ಯಾನ್ಚೆಸ್ಟರ್
ಜೂನ್ 22: ಟೀಂ ಇಂಡಿಯಾ ವರ್ಸಸ್ ಆಫ್ಗಾನಿಸ್ತಾನ- ರೋಸ್ ಬೌಲ್, ಸೌತಾಂಪ್ಟನ್
ಜೂನ್ 27: ಟೀಂ ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್- ಓಲ್ಡ್ ಟ್ರಾಫೋರ್ಡ್, ಮ್ಯಾನ್ಚೆಸ್ಟರ್
ಜೂನ್ 30: ಟೀಂ ಇಂಡಿಯಾ ವರ್ಸಸ್ ಇಂಗ್ಲೆಂಡ್ - ಎಡ್ಜ್ ಬ್ಯಾಸ್ಟೋನ್, ಬರ್ಮಿಂಗ್ ಹ್ಯಾಮ್
ಜುಲೈ 02: ಟೀಂ ಇಂಡಿಯಾ ವರ್ಸಸ್ ಬಾಂಗ್ಲಾದೇಶ- ಎಡ್ಜ್ ಬ್ಯಾಸ್ಟೋನ್, ಬರ್ಮಿಂಗ್ಹ್ಯಾಮ್
ಜುಲೈ 06: ಟೀಂ ಇಂಡಿಯಾ ವರ್ಸಸ್ ಶ್ರೀಲಂಕಾ- ಹೆಡಿಂಗ್ಲಿ, ಲೀಡ್ಸ್
ಒಟ್ಟಾರೆ 2019ರ ಐಸಿಸಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ:
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics